

ಕೋಲಾರ: ನರ ಮೇಧ ಮೇರೆಯುತ್ತಿದ್ದ ಉಗ್ರರನ್ನು ಮಟ್ಟ ಹಾಕಲು ಪ್ರಧಾನಿ ಮೋದಿ ಅವರು ದಿಟ್ಟ ಹೆಜ್ಜೆಯಿಟ್ಟಿದ್ದು, ಮೊದಲ ಹಂತದಲ್ಲಿ ಅಪರೇಷನ್ ಸಿಂದೂರ ಯಶಸ್ವಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಭಾರತದ ಸೈನಿಕರ ಒಳಿತಿಗಾಗಿ ನಗರದ ಕೋಲಾರಮ್ಮ ದೇವಿಗೆ ಬುಧವಾರ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರೊಂದಿಗೆ ಮಾತನಾಡಿ, ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಸೈನಿಕ್ಷರಿಗೆ ಶಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಂದು ಯೋಧರು ನಿರ್ಭೀತಿಯಿಂದ ಉಗ್ರರ ವಿರುದ್ಧ ಹೋರಾಟ ಮಾಡಲು ಬೆಂಬಲಕ್ಕೆ ನಿಂತಿದ್ದಾರ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಯಿಂದ ಜಮ್ಮು ಕಾಶ್ಮೀರದಲ್ಲಿ ಸಾವಿರಾರು ಕುಟುಂಬಗಳು ಬೀದಿ ಪಲಾಗಿವೆ. ಕಾಶ್ಮೀರದಲ್ಲಿ ಉಗ್ರರು ದಾಳಿ ಮಾಡಿ ಭಾರತೀಯನ್ನು ಹತ್ಯೆ ಮಾಡಿರುವುದಕ್ಕೆ ಇಡೀ ದೇಶ, ವಿಶ್ವ ಖಂಡಿಸುತ್ತಿವೆ. ಇದಕ್ಕೆ ಪ್ರತ್ಯುತ್ತರ ನೀಡಲು ದೇಶ ಮುಂದಾಗಿದ್ದು, ಉಗ್ರರ ಮೇಲೆ ಕಳೆದ ರಾತ್ರಿಯಿಂದ ದಾಳಿ ಆರಂಭವಾಗಿದೆ. ಯಶಸ್ಸು ಸಿಗಲಿ ಎಂದು ನಗರದೇವತೆ ಕೋಲಾರಮ್ಮ ಬಳಿ ಪ್ರಾರ್ಥನೆ ಮಾಡಿದ್ದೇನೆ ತಿಳಿಸಿದರು.
ಉಗ್ರಗಾಮಿಗಳ ವಿರುದ್ಧ ಹೋರಾಟದಲ್ಲಿ ಯಶಸ್ಸು ಸಿಗುತ್ತದೆ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ. ಇಂತಹ ಯುದ್ಧದ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಾಗಿ ಬೆಂಬಲಿ ಸೂಚಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ನವರು ಈಗಲೂ ಸಹ ಅವರ ತೀರ್ಮಾನವನ್ನು ತಿಳಿಸುತ್ತಿಲ್ಲ. ಇನ್ನಾದರು ಎಚ್ಚೆತ್ತುಕೊಂಡು ದೇಶದ ಪರ ನಿಂತು, ದೇಶ ವಿರೋಧಿ ಚಟುವಟಿಕೆಗಳಿಗೆ ಬೆಂಬಲಿಸುವದನ್ನು ಬಿಡಬೇಕು ಎಂದು ಕಿವಿಮಾತು ಹೇಳಿದರು.
ನಮ್ಮ ದೇಶದ ಯೋಧರು ಪಾಕಿಸ್ತಾನದ ವಿರುದ್ಧ ಹೋರಾಟ ಪ್ರಾರಂಭಿಸಿದ್ದು, ಭಾರತಕ್ಕೆ ಜಯ ಸಿಗಬೇಕು. ಉಗ್ರರು ಇಡೀ ಜಗತ್ತಿಗೆ ಮಾರಕವಾಗಿ ರಕ್ತದೋಕುಳ ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಕಾರ ತೆಗೆದುಕೊಳ್ಳಲು ಮೋದಿ ಅವರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ, ಇದಕ್ಕೆ ಇಡೀ ದೇಶ ಬೆಂಬಲವಾಗಿ ನಿಲ್ಲಬೇಕು ಎಂದು ಕೋರಿದರು.