

Operation Sindoor: ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ದಾರ್ ಮತ್ತೊಮ್ಮೆ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಪಾಕ್ ಸಂಸತ್ತಿನಲ್ಲಿ ನಕಲಿ ಸುದ್ದಿಗಳನ್ನು ಓದುವ ಮೂಲಕ ಅವರೇ ಸುದ್ದಿಲ್ಲಿದ್ದಾರೆ.
ಹೌದು, ಪಾಕಿಸ್ತಾನ ವಾಯುಪಡೆಯನ್ನು ವಿದೇಶಿ ಮಾಧ್ಯಮಗಳು ಪ್ರಶಂಶಿಸಿವೆ. ಇದರ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಸಂಸತ್ತಿನಲ್ಲಿ ಇಶಾಕ್ ದಾರ್ ಹೇಳಿದ್ದಾರೆ.
ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ ಅನ್ನು ಹೊಗಳಿ ಅಂತರರಾಷ್ಟ್ರೀಯ ಮಾಧ್ಯಮಗಳು ಹಲವಾರು ಲೇಖನಗಳನ್ನು ಪ್ರಕಟಿಸಿವೆ. ಈ ಸಂದರ್ಭದಲ್ಲಿ, ಇಶಾಕ್ ದಾರ್ ಸಂಸತ್ತಿನಲ್ಲಿ ಡೈಲಿ ಟೆಲಿಗ್ರಾಫ್ ಮುಖ್ಯಾಂಶವನ್ನು ಉಲ್ಲೇಖಿಸಿ, ಬ್ರಿಟಿಷ್ ಡೈಲಿ ಟೆಲಿಗ್ರಾಫ್ "ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನ ವಾಯುಪಡೆಯ ನಡವಳಿಕೆಯನ್ನು ಶ್ಲಾಘಿಸುವ ಲೇಖನವನ್ನು ಪ್ರಕಟಿಸಿತು" ಎಂದು ಹೇಳಿದರು.
ಡೈಲಿ ಟೆಲಿಗ್ರಾಫ್ ವಾಸ್ತವವಾಗಿ ಆ ಶೀರ್ಷಿಕೆಯನ್ನು ಬರೆದಿಲ್ಲ. ಪಾಕಿಸ್ತಾನಿಗಳು ಕೃತಕ ಬುದ್ಧಿಮತ್ತೆ ಬಳಸಿ ನಕಲಿ ಸುದ್ದಿಗಳನ್ನು ಸೃಷ್ಟಿಸಿದರು. ಇಶಾಕ್ದಾರ್ ಅದೇ ಸತ್ಯ ಎಂದು ಭಾವಿಸಿ ಭ್ರಮೆಗೊಂಡಿದ್ದಾರೆ. ವಿದೇಶಿ ಮಾಧ್ಯಮಗಳು ಪಾಕಿಸ್ತಾನ ವಾಯುಪಡೆಯನ್ನು 'ಆಕಾಶದ ರಾಜ' ಎಂದು ಹೊಗಳಿವೆ ಎಂದು ಅವರು ಘೋಷಿಸಿದರು. ಇದರಿಂದ ಆಘಾತಕ್ಕೊಳಗಾದ ಡೈಲಿ ಟೆಲಿಗ್ರಾಫ್, ತಾವು ಎಂದಿಗೂ ಅಂತಹ ಶೀರ್ಷಿಕೆಯನ್ನು ಪ್ರಕಟಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಡೈಲಿ ಟೆಲಿಗ್ರಾಫ್ ಮಾತ್ರವಲ್ಲ, ಪಾಕಿಸ್ತಾನಿ ಮಾಧ್ಯಮ ಸಂಸ್ಥೆ ಡಾನ್ ನ್ಯೂಸ್ ಕೂಡ ಇದನ್ನೇ ಹೇಳಿದೆ. ಸಂಸತ್ತಿನ ಅಧಿವೇಶನದಲ್ಲಿ ಅವರ ಹೇಳಿಕೆಗಳನ್ನು ಪಾಕಿಸ್ತಾನ ಖಂಡಿಸಿತು.(ಏಜೆನ್ಸೀಸ್)