ಆಪರೇಷನ್ ಸಿಂಧೂರ್ ಭಾರತದ ಸಂಕಲ್ಪ; ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಸೇನಾ ಮುಖ್ಯಸ್ಥರು| UPENDRA DWIVEDI

upendra dwivedi
Published on

ಲಡಾಖ್: ಕಾರ್ಗಿಲ್ ವಿಜಯ್ ದಿವಸದ ಸಂದರ್ಭದಲ್ಲಿ, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಭಾರತೀಯ ಸೇನೆಯ ಸಿದ್ಧತೆಗಳು, ಬದಲಾವಣೆಗಳು ಮತ್ತು ಪಾಕಿಸ್ತಾನಕ್ಕೆ ನೀಡಿದ ಪ್ರತಿಕ್ರಿಯೆಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.

ಲಡಾಖ್​​ನ ​​ದ್ರಾಸ್​ ಪಟ್ಟಣದಲ್ಲಿ ಇಂದು (26) ಕಾರ್ಗಿಲ್​ ವಿಜಯ್​ ದಿವಸದ ನಿಮಿತ್ತ ನಡೆದ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಅವರು, 26 ವರ್ಷಗಳ ನಂತರ ನಡೆದ ಸೇನಾ ಕಾರ್ಯಾಚರಣೆಯು ಕಾರ್ಗಿಲ್​ ವಿಜಯವನ್ನು ದಿವಸವನ್ನು ನೆನಪಿಸುತ್ತದೆ. ಭಾರತದ ಸೇನೆಯ ಪ್ರತಿ ದಾಳಿಗಳು ಸಂಕಲ್ಪ, ಸ್ಪಷ್ಟ ಸಂದೇಶ ಮತ್ತು ದೃಢ ಪ್ರತಿಕ್ರಿಯೆ ಹೊಂದಿರುತ್ತದೆ ಎಂದು ಹೇಳಿದರು. ಭಾರತೀಯ ಸೇನೆಯು ಭವಿಷ್ಯದ ಯುದ್ಧತಂತ್ರಗಳನ್ನು ಅಳವಡಿಸಿಕೊಳ್ಳುವತ್ತ ಪ್ರಮುಖ ಹೆಜ್ಜೆ ಇಟ್ಟಿದ್ದು, ಅದರಂತೆ, ಹೊಸ ಸೇನಾ ಘಟಕಗಳ ಮೂಲಕ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ಸೇನೆಯು ಸಾಂಪ್ರದಾಯಿಕ ಶಕ್ತಿಯ ಜೊತೆಗೆ ಆಧುನಿಕ ತಂತ್ರಜ್ಞಾನ, ಡ್ರೋನ್ ಶಕ್ತಿಯ ಬಳಕೆ, ಕೃತಕ ಬುದ್ಧಿಮತ್ತೆ, ಮತ್ತು ಸ್ಥಳೀಯವಾಗಿ ಉನ್ನತ ಶಸ್ತ್ರಾಸ್ತ್ರಗಳನ್ನು ಬಳಸುವ ಮೂಲಕ ಮುಂದಿನ ಪೀಳಿಗೆಯ ಯುದ್ಧಗಳಿಗೆ ಸಜ್ಜಾಗುತ್ತಿದೆ ಎಂದರು.

ಮೇ 7 ರಿಂದ 9 ರವರೆಗೆ ಪಾಕಿಸ್ತಾನ ನಡೆಸಿದ ಚಟುವಟಿಕೆಗಳಿಗೆ ಭಾರತೀಯ ಸೇನೆಯು ನಿಖರವಾದ ಪ್ರತಿಕ್ರಿಯೆಯನ್ನು ನೀಡಿತು. ನಮ್ಮ ಸೇನಾ ವಾಯು ರಕ್ಷಣೆಯು ಯಾವುದೇ ಡ್ರೋನ್ ಅಥವಾ ಕ್ಷಿಪಣಿ ಭೇದಿಸಲು ಸಾಧ್ಯವಾಗದ ಅಜೇಯ ಗೋಡೆಯಂತೆ ನಿಂತಿತ್ತು. ಭಾರತೀಯ ಸೇನೆಯು ತನ್ನ ಪರಾಕ್ರಮ ಪ್ರದರ್ಶನದಲ್ಲಿ ಎಂದೂ ಹಿಂದೆ ಬಿದ್ದಿಲ್ಲ. 1999 ರ ಕಾರ್ಗಿಲ್​ ಯುದ್ಧದ ವೇಳೆಗಿನ ಆಪರೇಷನ್​ ವಿಜಯ್​ ಮತ್ತು ಪಹಲ್ಗಾಮ್​ ದಾಳಿಗೆ ಪ್ರತಿಯಾಗಿ ನಡೆದ ಆಪರೇಷನ್​ ಸಿಂದೂರ ಕಾರ್ಯಾಚರಣೆಗಳಲ್ಲಿ ನಿಖರ ಫಲಿತಾಂಶ ತಂದಿದೆ ಎಂದು ಸೇನಾ ಮುಖ್ಯಸ್ಥ ಜನರಲ್​ ಉಪೇಂದ್ರ ದ್ವಿವೇದಿ ಅವರು ಹೇಳಿದರು.

(ಏಜೆನ್ಸೀಸ್)

ಇನ್ನೂ ಲಡಾಖ್‌ನಲ್ಲಿ ದ್ವಿ-ಬಳಕೆಯ ಮೂಲಸೌಕರ್ಯದ ಅಡಿಯಲ್ಲಿ ರಸ್ತೆಗಳು, ಸೇತುವೆಗಳು ಮತ್ತು ಜಾಲಗಳನ್ನು ನಿರ್ಮಿಸಲಾಗುತ್ತಿದೆ. ಇದು ಸೈನ್ಯಕ್ಕೆ ಮಾತ್ರವಲ್ಲದೆ ಸ್ಥಳೀಯ ನಾಗರಿಕರಿಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಿದೆ. ಇದರೊಂದಿಗೆ, ವೈಬ್ರಂಟ್ ವಿಲೇಜ್ ಕಾರ್ಯಕ್ರಮದಡಿಯಲ್ಲಿ ಆಯ್ದ ಹಳ್ಳಿಗಳಲ್ಲಿ ಸೈನ್ಯವು ಆದ್ಯತೆಯ ಮೇರೆಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಯುದ್ಧಭೂಮಿ, ಆಧ್ಯಾತ್ಮಿಕ, ಪರಿಸರ, ಪರಂಪರೆ ಮತ್ತು ಸಾಹಸ ಪ್ರವಾಸೋದ್ಯಮದಂತಹ ಕ್ಷೇತ್ರಗಳಲ್ಲಿ ಗಡಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಜನರಲ್ ದ್ವಿವೇದಿ ಹೇಳಿದರು

ಭಾರತೀಯ ಸೇನೆ ರುದ್ರ ಬ್ರಿಗೇಡ್ ಹಾಗೂ ‘ಭೈರವ್ ಲೈಟ್ ಕಮಾಂಡೋ ಬೆಟಾಲಿಯನ್’ ಎಂಬ ಹೊಸ ಘಟಕವನ್ನು ರೂಪಿಸಿದೆ. ಈ ಘಟಕಗಳು ಅತ್ಯಂತ ಮಾರಕವಾದವು. ಶತ್ರು ಸೇನೆಗೆ ಗಡಿಗಳಲ್ಲಿ ಹಠಾತ್ತನೆ ದಾಳಿ ಮಾಡುವ ಮೂಲಕ ಶತ್ರುಗಳಲ್ಲಿ ಗೊಂದಲ ಉಂಟುಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಇದರೊಂದಿಗೆ, ಭೈರವ್ ಕಮಾಂಡೋಗಳನ್ನು ಪರ್ವತ ಪ್ರದೇಶಗಳು, ಕಾಡುಗಳು ಹಾಗೂ ಪ್ರವೇಶಿಸಲು ಕಷ್ಟವಾಗುವ ಗಡಿಭಾಗಗಳಲ್ಲಿ ಕಾರ್ಯಚರಣೆಗೆ ತಯಾರು ಮಾಡಲಾಗಿದೆ ಎಂದು ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net