

ಚಿಕ್ಕಮಗಳೂರು; ಚಾರ್ಮಾಡಿ ಫಾಟಿಯ ನಿಷೇಧಿತ ಪ್ರದೇಶದಲ್ಲಿ ಟ್ರೆಕ್ಕಿಂಗ್ಗೆ ತೆರಳಿದ 103 ಮಂದಿ ಪ್ರವಾಸಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
(ಏಜೆನ್ಸೀಸ್)
ಪ್ರವಾಸಿಗರು ಬೆಂಗಳೂರಿನ ಪ್ರತಿಷ್ಠಿತ ಕಂಪನಿಯ ಉದ್ಯೋಗಿಗಳು ಎನ್ನಲಾಗಿದೆ. ಟೂರಿಸ್ಟ್ ಪ್ಯಾಕೇಜ್ ಅಡಿ ಟೆಕ್ಕಿಗಳು ಪ್ರವಾಸಕ್ಕೆ ಬಂದಿದ್ದರು ಎನ್ನಲಾಗಿದ್ದು, ಬಾಳೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮುಡಿಗೇರಿ ತಾಲೂಕಿನ ಬಿದರಿತಳ ಗ್ರಾಮದ ನಿಷೇಧಿತ ಪ್ರದೇಶಕ್ಕೆ ಪ್ರವಾಸಿಗರು ಟ್ರೆಕ್ಕಿಂಗ್ಗೆ ಹೋದ ಕಾರಣ, ಎರಡು ಬಸ್ ಮೂರು ಪಿಕಪ್ ವಾಹನಗಳನ್ನು ಸೇರಿದಂತೆ ಒಟ್ಟು ಬೆಂಗಳೂರು ಮೂಲದ 103 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.