ಆಪರೇಷನ್ ಸಿಂಧೂರ ಭಾರತದ ಎಲ್ಲಾ ತಾಯಂದಿರು, ಸಹೋದರಿಯರಿಗೆ ದೊರೆತ ವಿಜಯ: ಓಂ ಬಿರ್ಲಾ | Jaipur

Jaipur
Published on

Jaipur: ಪಹಲ್ಗಾಮ್​ ದಾಳಿಯ ಪ್ರತೀಕಾರವಾಗಿ ಭಾರತವೂ ಪಾಕ್​ ಉಗ್ರರ ನೆಲೆಯನ್ನು ಗುರಿಯಾಗಿರಿಸಿಕೊಂಡು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ತಕ್ಕ ಉತ್ತರ ನೀಡಿತು. ಆಪರೇಷನ್ ಸಿಂಧೂರ್ ಯಶಸ್ವಿಯಾಗಿ ನಿರ್ವಹಿಸಿದ್ದಕ್ಕಾಗಿ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯವನ್ನು ಶ್ಲಾಘಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ , ಈ ವಿಜಯವು ಭಾರತದ ಪ್ರತಿಯೊಬ್ಬ ತಾಯಿ, ಸಹೋದರಿ ಮತ್ತು ಮಗಳಿಗೆ ಸೇರಿದ್ದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ ಎಂದು ಹೇಳಿದರು.

ಮಂಗಳವಾರ (ಮೇ.20) 'ತಿರಂಗ ಯಾತ್ರೆ'ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಭಾರತದ ಪ್ರತಿಯೊಬ್ಬ ನಾಗರಿಕನ ಹೃದಯದಲ್ಲಿ ದೇಶಭಕ್ತಿಯ ಅಲೆ ಎದ್ದಿದೆ ಎಂದು ತಿಳಿಸಿದರು.

"ಸ್ತ್ರೀ ಶಕ್ತಿ ದೇಶದ ಶಕ್ತಿಯಾಗಿ ಮಾರ್ಪಟ್ಟಿದೆ, ನಮ್ಮ ಸೈನಿಕರಿಗೆ ಸ್ಫೂರ್ತಿ ನೀಡುತ್ತದೆ. ಆಪರೇಷನ್ ಸಿಂಧೂರ ಸಾಧನೆಯನ್ನು ಸುವರ್ಣಾಕ್ಷರಗಳಲ್ಲಿ ಕೆತ್ತಲಾಗುವುದು" ಎಂದು ಬಿರ್ಲಾ ಹೇಳಿದರು.

"ಈ ಕಾರ್ಯಾಚರಣೆಯು ಕೇವಲ ಮಿಲಿಟರಿ ತಂತ್ರಕ್ಕಿಂತ ಹೆಚ್ಚಾಗಿ, ಗಡಿಗಳಲ್ಲಿ ಕಾವಲು ಕಾಯುವ, ಬುಡಕಟ್ಟು ಜನಾಂಗವನ್ನು ರಕ್ಷಿಸುವ ಸಂಗಾತಿಗಳಿರುವ ಎಲ್ಲಾ ಮಹಿಳೆಯರ 'ಸಿಂಧೂರ'ವನ್ನು ರಕ್ಷಿಸುವ ಪ್ರತಿಜ್ಞೆಯಾಗಿತ್ತು" ಎಂದು ತಿಳಿಸಿದರು.

"ಆಪರೇಷನ್ ಸಿಂಧೂರ್ ಭಯೋತ್ಪಾದನೆಯ ವಿರುದ್ಧ ಭಾರತದ ನಿರ್ಣಾಯಕ ಹೋರಾಟವಾಗಿತ್ತು, ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಬೇರುಸಹಿತ ಕಿತ್ತುಹಾಕುವವರೆಗೂ ಇದು ಮುಂದುವರಿಯುತ್ತದೆ" ಎಂದು ಬಿರ್ಲಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net