ಕಳ್ಳತನ ಮಾಡಿ 20 ಮಕ್ಕಳ ಶಾಲೆ, ಕಾಲೇಜು ಫೀಸ್ ಕಟ್ಟಿದ! ಬೆಂಗಳೂರಿನಲ್ಲೋಬ್ಬ ಡಿಫರೆಂಟ್​​ ಕಳ್ಳ.. thief

Bangalore thief pays school and college fees of 20 children by stealing
Published on

ಬೆಂಗಳೂರು: ( thief )  ಮನೆ ಕಳ್ಳತನ ಮಾಡಿ ಮಕ್ಕಳ ಶಾಲೆ, ಕಾಲೇಜು ಶುಲ್ಕ ಪಾವತಿಸಿದ್ದ ಆರೋಪಿ ಸೇರಿ ಮೂವರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೇಗೂರು ನಿವಾಸಿ ಶಿವು ಅಲಿಯಾಸ್​ ಶಿವರಪ್ಪನ್, ಈತನ ಸ್ನೇಹಿತರಾದ ಅನಿಲ್‌ ಅಲಿಯಾಸ್​ ಜಗ್ಗ ಮತ್ತು ವಿವೇಕ ಬಂಧಿತರು. ಬ್ಯಾಡರಹಳ್ಳಿ ಪೊಲೀಸರು ಬಂಧಿಸಿ ತನಿಖೆ ಕೈ ಗೊಂಡಿದ್ದಾರೆ.

ಬೇಗೂರು ನಿವಾಸಿ ಶಿವು ಅಲಿಯಾಸ್​ ಶಿವರಪ್ಪನ್ ಹೆಂಡತಿ-ಮಕ್ಕಳಿಲ್ಲದೆ ಆತ್ಮಹತ್ಯೆಗೆ ಯೋಚಿಸಿದ್ದನಂತೆ. ಆದರೆ, ಏರಿಯಾದಲ್ಲಿ ಸ್ನೇಹಿತರು ಮಕ್ಕಳ ಸ್ಕೂಲ್ ಫೀಸ್ ಕಟ್ಟಲು ಪರದಾಡುತ್ತಿರುವುದನ್ನು ನೋಡಿದ್ದಾನೆ. ನಂತರ ಹಲವೆಡೆ ಮನೆಗಳಿಗೆ ನುಗ್ಗಿ ಕದ್ದ ಚಿನ್ನಾಭರಣವನ್ನು ಸ್ನೇಹಿತರಾದ ಅನಿಲ್‌ ಅಲಿಯಾಸ್ ಜಗ್ಗ ಮತ್ತು ವಿವೇಕನ ಸಹಾಯದಿಂದ ಆರೋಪಿ ಶಿವು ತಮಿಳುನಾಡಿನಲ್ಲಿ 22 ಲಕ್ಷಕ್ಕೆ ಚಿನ್ನ ಮಾರಾಟ ಮಾಡಿಸಿದ್ದನು. ಬಂದ ಹಣದಲ್ಲಿ ವಿವೇಕನಿಗೆ 4 ಲಕ್ಷ, ಅನಿಲ್‌ಗೆ 4 ಲಕ್ಷ ರೂ. ಮೌಲ್ಯದ ಆಟೋ ಕೊಡಿಸಿದ್ದಾನೆ. ಉಳಿದ 14 ಲಕ್ಷದಲ್ಲಿ ಏರಿಯಾದ 20 ಮಕ್ಕಳ ಶಾಲೆ ಹಾಗೂ ಕಾಲೇಜ್ ಫೀಸ್ ಕಟ್ಟಿದ್ದಾನೆ.

ನಡೆದಿದ್ದೇನು?:

ಮನೆಗಳ್ಳರ ಬೆನ್ನತ್ತಿದ್ದ ಬ್ಯಾಡರಹಳ್ಳಿ ಪೊಲೀಸರಿಂದ ಮೂವರನ್ನೂ ಬಂಧಿಸಿದ್ದಾರೆ. ಆರೋಪಿಗಳಾದ ಶಿವು, ಅನಿಲ್ ಹಾಗೂ ವಿವೇಕ್​ನನ್ನು ಬಂಧಿಸಿ 24 ಲಕ್ಷ ಮೌಲ್ಯದ 260 ಗ್ರಾಂ ಚಿನ್ನದ ಗಟ್ಟಿಯನ್ನು ಜಪ್ತಿ ಮಾಡಿದ್ದಾರೆ. ಆಗ ಈ ಘಟನೆ ಬೆಳಕಿಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net