

ದೆಹಲಿ: ರೈಲ್ವೆ ಎಸಿ ಕೋಚ್‌ನ ಛಾವಣಿಯ ಮೂಲಕ ನೀರು ಸೋರಿಕೆಯಾಗಿ ಪ್ರಯಾಣಿಕರು ತೊಂದರೆಗೆ ಒಳಗಾದ ಘಟನೆ ಆವಂತಿಕಾ ಎಕ್ಸ್‌ಪ್ರೆಸ್‌ನಲ್ಲಿ ನಡೆದಿದೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ದಶಪಥ: ಅಪಘಾತದಲ್ಲಿ ಈ ತಿಂಗಳು 45 ಸಾವು!; ಸಚಿವರಿಂದ ಅಧಿಕಾರಿಗಳ ಸಭೆ, ಸದ್ಯದಲ್ಲೇ ತನಿಖೆ?
ಮುಂಬೈ-ಇಂದೋರ್ ಆವಂತಿಕಾ ಎಕ್ಸ್‌ಪ್ರೆಸ್‌ನ ಪ್ರಯಾಣಿಕರೊಬ್ಬರು ಮಳೆಯ ಸಮಯದಲ್ಲಿ ಎಸಿ ಕೋಚ್‌ನ ಮೇಲ್ಛಾವಣಿಯಿಂದ ನೀರು ಸೋರುತ್ತಿರುವ ಹಾಗೂ ಪ್ರಯಾಣಿಕನ ಅಲ್ಲಿಯೇ ಕುಳಿತಿರುವ ಸ್ಥಿತಿಯನ್ನು ತೋರಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕೂಡಲೇ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಕುರಿತು ತೀವ್ರ ಆಕ್ಷೇಪದ ಜತೆಗೆ ತರಹೇವಾರಿ ಕಾಮೆಂಟ್ಗಳನ್ನು ಮಾಡಿದ್ದಾರೆ.
ಕಾಂಗ್ರೆಸ್ ಕೂಡ್ ಈ ವೀಡಿಯೊವನ್ನು ಮರು-ಶೇರ್ ಮಾಡಿದ್ದು, ಪ್ರಚಾರದ ಬದಲಾಗಿ ರೈಲ್ವೆಯ ಅಭಿವೃದ್ಧಿಗಾಗಿ ಹಲವಾರು ಕೆಲಸಗಳನ್ನು ಮಾಡಬಹುದಿತ್ತು. ಹೊಸ ರೈಲುಗಳಿಗೆ ಹಸಿರು ಧ್ವಜವನ್ನು ತೋರಿಸುವ ರೈಲ್ವೆ ಮಂತ್ರಿ ಪ್ರಸ್ತುತ ವಿದೇಶದಲ್ಲಿದ್ದು, ಹೆಸರಿಗೆ ಮಾತ್ರ ರೈಲ್ವೆ ಮಂತ್ರಿ ಎನಿಸಿಕೊಂಡಿರುವ ವ್ಯಕ್ತಿ ಸ್ವಲ್ಪ ಇತ್ತ ಗಮನಹರಿಸಬೇಕು ಎಂದು ವ್ಯಂಗ್ಯವಾಡಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಕೊಲೆ ಪ್ರಕರಣದಲ್ಲಿ ಪರಾರಿಯಾಗಿದ್ದ ಆರೋಪಿ 27 ವರ್ಷಗಳ ಬಳಿಕ ಬಂಧನ: ಈಕೆಗಾಗಿ ಮೂರು ರಾಜ್ಯದಲ್ಲಿ ಹುಡುಕಾಡಿದ್ದ ಪೊಲೀಸ್
ಈ ವಿಡಿಯೋಗೆ ಭಾರತೀಯ ರೈಲ್ವೆಯು ತೆರೆದ ಶವರ್ ಸೌಲಭ್ಯದೊಂದಿಗೆ ಹೊಸ ಸೌಲಭ್ಯ ಪ್ರಾರಂಭಿಸಿದೆ ಎಂದು ಕೆಲವರು ಪ್ರತಿಕ್ರಿಯೆ ನೀಡಿದರೆ, ಇನ್ನು ಕೆಲವರು ಭಾರತೀಯ ರೈಲ್ವೆ ಈಗ ಪ್ರಯಾಣಿಕರಿಗೆ ಶವರ್ ಜೆಲ್, ಶಾಂಪೂ ಮತ್ತು ಬಾತ್ರೂಮ್ನ್ನು ಒದಗಿಸಲು ಚರ್ಚಿಸುತ್ತಿದೆ ಎಂದು ವ್ಯಂಗ್ಯಭರಿತವಾಗಿ ಕಾಮೆಂಟ್ನಲ್ಲಿ ತಿಳಿಸಿದ್ದಾರೆ.
ಕೂಡಲೇ ಎಚ್ಚೆತ್ತ ಪಶ್ಚಿಮ ಪಶ್ಚಿಮ ರೈಲ್ವೇಸ್ ಈ ಸಮಸ್ಯೆಯನ್ನು ಗಮನಿಸಿದ್ದು ಆವಂತಿಕಾ ಎಕ್ಸ್‌ಪ್ರೆಸ್‌ನ ಎಲ್ಲಾ ಕೋಚ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಪ್ರಯಾಣಿಕರ ಅನುಕೂಲವು ನಮ್ಮ ಮೊದಲ ಆದ್ಯತೆಯಾಗಿದ್ದು, ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದೆ.(ಏಜೆನ್ಸೀಸ್)