ಆ.11ರಿಂದ ಓಪನ್ ಸ್ಕೂಲ್ ಪರೀಕ್ಷೆಗಳು ಆರಂಭ: ಇಲ್ಲಿದೆ ಸಂಪೂರ್ಣ ಮಾಹಿತಿ

PU Exam
Published on

ಬೆಂಗಳೂರು: ಕರ್ನಾಟಕ ಮುಕ್ತ ಶಾಲೆ 2025ನೇ ಸಾಲಿನ ಪೂರಕ ಪರೀಕ್ಷೆಗೆ (10ನೇ ತರಗತಿ) ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಬಿಡುಗಡೆ ಮಾಡಿದೆ. ಆ.11ರಿಂದ 21ರವರೆಗೆ ಪರೀಕ್ಷೆಗಳು ನಡೆಯಲಿವೆ. ಈ ಮೊದಲು ಜು.28ರಿಂದ ಆ.6ರವರೆಗೆ ನಡೆಸಲು ಉದ್ದೇಶಿಸಲಾಗಿತ್ತು.

ಪ್ರಥಮ ಭಾಷೆಗೆ 125 ಹಾಗೂ ಐಚ್ಛಿಕ ವಿಷಯಗಳಿಗೆ ನೂರು ಅಂಕಗಳು ಇರಲಿವೆ. ಪ್ರಥಮ ಭಾಷೆ ಹಾಗೂ ಐಚ್ಛಿಕ ವಿಷಯಗಳ ಪ್ರಶ್ನೆಪತ್ರಿಕೆ ಓದಲು 15 ನಿಮಿಷ ಹಾಗೂ ಬರೆಯಲು 3 ಗಂಟೆ ಕಾಲಾವಕಾಶ ಇರಲಿದೆ. ದ್ವಿತೀಯ ಹಾಗೂ ತೃತೀಯ ಭಾಷೆ ಪರೀಕ್ಷೆಗೆ ಓದಲು 15 ನಿಮಿಷ ಹಾಗೂ ಬರೆಯಲು 2 ಗಂಟೆ 30 ನಿಮಿಷ ನಿಗದಿ ಮಾಡಲಾಗಿದೆ.

ಪ್ರಥಮ ಭಾಷೆ ಹಾಗೂ ಐಚ್ಛಿಕ ಭಾಷೆ ಪರೀಕ್ಷೆಗಳು ಬೆಳಗ್ಗೆ 10ರಿಂದ ಮಧ್ಯಾಹ್ನ 1.15ರವರೆಗೆ ಉಳಿದ ಪರೀಕ್ಷೆಗಳು ಬೆಳಗ್ಗೆ 10ರಿಂದ ಮಧ್ಯಾಹ್ನ 12.45ರವರೆಗೆ ನಡೆಯಲಿವೆ ಎಂದು ಮಂಡಳಿ ಹೊರಡಿಸಿರುವ ವೇಳಾಪಟ್ಟಿಯಲ್ಲಿ ತಿಳಿಸಿದೆ.

ಪರಿಷ್ಕೃತ ವೇಳಾಪಟ್ಟಿ

ಆ.11- ಕನ್ನಡ, ಆ.12- ಇಂಗ್ಲಿಷ್, ಆ.13- ಹಿಂದಿ, ಆ.14- ವಿಜ್ಞಾನ, ಆ.16- ಗಣಿತ, ಆ.18- ಸಮಾಜ ವಿಜ್ಞಾನ, ಆ.19- ಅರ್ಥಶಾಸ, ಆ.20- ವಾಣಿಜ್ಯ ಅಧ್ಯಯನ, ಆ.21- ಗೃಹ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net