ಮಿಜೋರಾಂ ರಸ್ತೆಬದಿಯ ಗ್ರಂಥಾಲಯ

LIBRARY
Published on

ಸಾಮಾನ್ಯವಾಗಿ ಎಲ್ಲ ಊರುಗಳಲ್ಲಿಯೂ ಗ್ರಂಥಾಲಯಗಳು ಇದ್ದೇ ಇರುತ್ತವೆ. ಆದರೆ ಬಹುಪಾಳು ಅವುಗಳಿಂದ ಪುಸ್ತಕಗಳನ್ನು ತೆಗೆದುಕೊಳ್ಳಲು ಶುಲ್ಕ ತೆರಬೇಕಾಗುತ್ತದೆ. ಆದರೆ ಸಾರ್ವಜನಿಕರಲ್ಲಿ ಪುಸ್ತಕ ಓದುವ ಅಭ್ಯಾಸ ಬೆಳೆಸುವ ದೃಷ್ಟಿಯಿಂದ ಮಿಜೋರಾಂನ ರಾಜಧಾನಿಯ ರಸ್ತೆ ಬದಿಯೊಂದರಲ್ಲಿ ಗ್ರಂಥಾಲಯ ತೆರೆಯಲಾಗಿದೆ.

ಯಾರು ಬೇಕಾದರೂ ಇಲ್ಲಿನ ಪುಸ್ತಕಗಳನ್ನು ತೆಗೆದುಕೊಂಡು ಓದಬಹುದು. ಹಾಗೆಯೇ ಪುಸ್ತಕಗಳ ಮೇಲೆ ಯಾವುದೇ ಭದ್ರತಾ ಶುಲ್ಕ ವಿಧಿಸಿಲ್ಲ. ಭಾರತೀಯ ಅರಣ್ಯ ಸೇವಾಧಿಕಾರಿ ಪ್ರವೀಣ್ ಕಸ್ವಾನ್ ಎನ್ನುವವರು ಟ್ವಿಟರ್​ನಲ್ಲಿ ಇದರ ಚಿತ್ರಗಳನ್ನು ಶೇರ್ ಮಾಡಿದ್ದು, ‘ಮಿಜೋರಾಂ ರಾಜಧಾನಿಯ ರಸ್ತೆ ಬದಿಯಲ್ಲಿ ಇಂಥ ಎರಡು ಸೊಗಸಾದ ಗ್ರಂಥಾಲಯಗಳಿವೆ. ಪ್ರತಿ ನಗರವೂ ಇದನ್ನು ಅನುಸರಿಸಬೇಕು’ ಎಂದು ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net