ಆನ್​ಲೈನ್​ನಲ್ಲೇ ಮದುವೆ!ಧಾರವಾಡದ ವರ ಕೊಪ್ಪಳದ ವಧು

marriage
Published on

ಧಾರವಾಡ: ಕರೊನಾ ಹಿನ್ನೆಲೆಯಲ್ಲಿ ಆನ್​ಲೈನ್ ಮೂಲಕವೇ ಮದುವೆ ಮಾಡಿದ ಅಪರೂಪದ ಪ್ರಸಂಗ ನಡೆದಿದೆ.

ಧಾರವಾಡದ ಆದರ್ಶ ನಗರದ ಇಮ್ರಾನ್ ನದಾಫ್ ಹಾಗೂ ಕೊಪ್ಪಳದ ತಾಜಮಾ ಬೇಗಂ ಮದುವೆ ಏ. 19ರಂದು ನಿಗದಿಯಾಗಿತ್ತು. ಆದರೆ ಲಾಕ್​ಡೌನ್ ಹಿನ್ನೆಲೆಯಲ್ಲಿ ನಿಗದಿತ ದಿನವೇ ಆನ್​ಲೈನ್​ನಲ್ಲೇ ವಿಡಿಯೋ ಕಾಲ್ ಮೂಲಕ ಮದುವೆಯಾಗಿದ್ದಾರೆ. ವರನ ಸ್ವಗೃಹ ಹಾಗೂ ವಧುವಿನ ಮನೆಯಲ್ಲಿ ಲ್ಯಾಪ್​ಟಾಪ್ ಇಟ್ಟು, ಎರಡೂ ಕುಟುಂಬದ ಸದಸ್ಯರು ಮಾಸ್ಕ್ ಹಾಕಿಕೊಂಡೇ ಸಂಪ್ರದಾಯ ನೆರವೇರಿಸಿದ್ದು ವಿಶೇಷ ವಾಗಿತ್ತು. ಜನವರಿಯಲ್ಲಿ ನಿಶ್ಚಿತಾರ್ಥವಾಗಿತ್ತು.

ಮದುವೆಗೆ 4 ಜನರು ಮಾತ್ರ ತೆರಳಲು ಪರವಾನಗಿ ಕೊಡುವುದಾಗಿ ಜಿಲ್ಲಾಡಳಿತ ಹೇಳಿತ್ತು. ಹೀಗಾಗಿ ಆನ್​ಲೈನ್ ಮೂಲಕ ಸರಳವಾಗಿ ಮದುವೆಯಾಗಿದ್ದೇವೆ. ಕೊಪ್ಪಳದಲ್ಲಿರುವ ಪತ್ನಿಯನ್ನು ಲಾಕ್​ಡೌನ್ ನಂತರದಲ್ಲಿ ಕರೆದುಕೊಂಡು ಬರಲಾಗುವುದು ಎಂದು ವರ ಇಮ್ರಾನ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net