

ಕೇಂದ್ರ ಸರ್ಕಾರ ಪಬ್ಜಿ ಗೇಮ್ ಸೇರಿ ಚೀನಾದ 118 ಆಪ್ಗಳನ್ನು ಬುಧವಾರ ರಾತ್ರಿ ಬ್ಯಾನ್ ಮಾಡಿದೆ. ಆದರೆ ಸರ್ಕಾರದ ಬ್ಯಾನ್ನ ಹೊರತಾಗಿಯೂ ಪಬ್ಜಿ ಆಡಬಹುದು ಎನ್ನಲಾಗುತ್ತಿದೆ.
ಸರ್ಕಾರ ಪಬ್ಜಿಯ ಮೊಬೈಲ್ ಆವೃತ್ತಿಯನ್ನು ಬ್ಯಾನ್ ಮಾಡಿದ್ದು, ಕಂಪ್ಯೂಟರ್ ಆವೃತ್ತಿ ನಿಷೇಧ ಪಟ್ಟಿಯಲ್ಲಿಲ್ಲ. ಪಬ್ಜಿ ಗೇಮ್ನ್ನು ದಕ್ಷಿಣ ಕೊರಿಯಾದ ಕಂಪನಿಯೊಂದು ಕಂಪ್ಯೂಟರ್ಗಳಿಗಾಗಿ ತಯಾರಿಸಿತ್ತು. ಆದರೆ ಆ ವೇಳೆ ಅದು ಹೆಚ್ಚು ಜನಪ್ರಿಯವಾಗಿರಲಿಲ್ಲ. ಬಳಿಕ ಚೀನಾದ ಟೆನ್ಸೆಂಟ್ ಹೋಲ್ಡಿಂಗ್ಸ್ ಲಿಮಿಟೆಡ್ ಕಂಪನಿ ಪರವಾನಿಗೆ ಪಡೆದು ಪಬ್ಜಿ ಗೇಮ್ ಮೊಬೈಲ್ ಆವೃತ್ತಿ ಬಿಡುಗಡೆ ಮಾಡಿತು.
ಪ್ರಸ್ತುತ ಕಂಪ್ಯೂಟರ್ಗಳಲ್ಲಿ ಆಡುವ ಪಬ್ಜಿ ಆವೃತ್ತಿಯ ಮೇಲೆ ಯಾವುದೇ ನಿರ್ಬಂಧವಿಲ್ಲ. ವರದಿಯೊಂದರ ಪ್ರಕಾರ ಭಾರತದಲ್ಲಿ ಸುಮಾರು 1.75 ಕೋಟಿ ಮಂದಿ ಈ ಗೇಮ್್ನು ತಮ್ಮ ಮೊಬೈಲ್ಗಳಲ್ಲಿ ಇನ್ಸಾ್ಟಲ್ ಮಾಡಿಕೊಂಡಿದ್ದಾರೆ.