ರದ್ದಾದರೂ ನಿಂತಿಲ್ಲ ಆನ್​ಲೈನ್ ಕ್ಲಾಸ್

online Classes 8 APR 20
Published on

ಬೆಂಗಳೂರು: ರಾಜ್ಯ ಸರ್ಕಾರ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಆನ್​ಲೈನ್ ಶಿಕ್ಷಣವನ್ನು ರದ್ದು ಮಾಡಿದ್ದರೂ ಬಹುತೇಕ ಶಾಲೆಗಳು ತರಗತಿ ಮುಂದುವರಿಸುತ್ತಿರುವುದು ಕಂಡು ಬಂದಿದೆ.

ಎಲ್​ಕೆಜಿಯಿಂದ 5ನೇ ತರಗತಿವರೆಗೆ ಆನ್​ಲೈನ್ ಶಿಕ್ಷಣ ರದ್ದುಗೊಳಿಸಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಬುಧವಾರ ಘೋಷಣೆ ಹೊರಡಿಸಿದ್ದರೂ ಈ ನಿರ್ಬಂಧ ಇನ್ನೂ ಆದೇಶದ ರೂಪದಲ್ಲಿ ತಲುಪಿಲ್ಲವೆಂದು ಬಹುತೇಕ ಖಾಸಗಿ ಶಾಲೆಗಳು ಆನ್​ಲೈನ್ ತರಗತಿ ಮುಂದುವರಿಸಿವೆ.

ಈ ಸಂಬಂಧ ನೂರಾರು ಪಾಲಕರು ಖಾಸಗಿ ಶುಲ್ಕ ಹೆಚ್ಚಳದ ದೂರು ಸ್ವೀಕಾರಕ್ಕಾಗಿ ತೆರೆದಿರುವ ಸಹಾಯವಾಣಿಗೆ ಕರೆ ಮಾಡಿ ಆನ್​ಲೈನ್ ತರಗತಿ ನಡೆಸುತ್ತಿರುವ ಬಗ್ಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ 6 ಮತ್ತು 7ನೇ ತರಗತಿ ಮಕ್ಕಳಿಗೂ ಆನ್​ಲೈನ್​​ ಕ್ಲಾಸ್​ ರದ್ದು?

ಪ್ರೀ-ರೆಕಾರ್ಡ್: ಮತ್ತಷ್ಟು ಶಾಲೆಗಳು ಆನ್​ಲೈನ್ ತರಗತಿ ಬದಲಾಗಿ ಪೂರ್ವ ನಿಯೋಜಿತವಾಗಿ ಪಾಠಗಳ ಬೋಧನೆಯನ್ನು ವಿಡಿಯೋ ರೆಕಾರ್ಡ್ ಮಾಡಿ ಯು-ಟ್ಯೂಬ್​ನಲ್ಲಿ ಅಪ್​ಲೋಡ್ ಮಾಡಿ ಅದರ ಲಿಂಕ್ ಅನ್ನು ಪಾಲಕರ ಮೊಬೈಲ್​ಗೆ ಕಳುಹಿಸುತ್ತಿವೆ.

ಈ ರೀತಿಯ ಆಡಿಯೋ ಅಥವಾ ವಿಡಿಯೋ ಚಿತ್ರೀಕರಿಸಿದ ಪ್ರೀ-ರೆಕಾರ್ಡ್​ಗಳನ್ನು 5ನೇ ತರಗತಿಯ ವಿದ್ಯಾರ್ಥಿಗಳಿಗೆ ಕಳುಹಿಸುವಂತಿಲ್ಲ. ಸಮಿತಿ ಈ ಎಲ್ಲ ವಿಚಾರಗಳ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲಿದೆ. | ಎಸ್. ಸುರೇಶ್ ಕುಮಾರ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net