ನೀರು ಕುಡಿಯಲು ಕಾಲುವೆ ಬಳಿ ಹೋದ ಯುವಕ, ಕಾಲು ಜಾರಿ ಬಿದ್ದು ಸಾವು

pic canal
Published on

ಯಾದಗಿರಿ: ನೀರು ಕುಡಿಯಲು ಹೋದ ಯುವಕನೋರ್ವ ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮಾರ್ನಾಳ್ ಬಳಿ ನಡೆದಿದೆ.

ನಾರಾಯಣಪುರ ಗ್ರಾಮದ ಜುಮ್ಮಣ್ಣ (22) ಮೃತ ಯುವಕ. ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ನಿನ್ನೆ ಬಾಯಾರಿಕೆಯಿಂದ ನೀರು ಕುಡಿಯಲು ಹೋದ ಯುವಕ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಇಂದು ಬೆಳಗ್ಗೆ ಮಾರ್ನಾಳ್ ಬಳಿಯ ಕಾಲುವೆಯಲ್ಲಿ ಶವ ಪತ್ತೆಯಾಗಿದೆ.

ನಾರಾಯಣಪುರ ಬಳಿಯ ತೋಟಗಾರಿಕೆ ಇಲಾಖೆಯ ನರ್ಸರಿಯಲ್ಲಿ ಮೃತ ಯುವಕ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿರುವ ನಾರಾಯಣಪುರ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net