ಅಪ್ಪನ ಕಾರಿಗೇ ಸಿಕ್ಕಿ ಪ್ರಾಣ ಬಿಟ್ಟ ಒಂದು ವರ್ಷದ ಮಗು!

child death-chamarajanagar
Published on

ಚಾಮರಾಜನಗರ: ಅಪ್ಪನನ್ನೇ ಹಿಂಬಾಲಿಸಿಕೊಂಡು ಮನೆಯ ಹೊರಗೆ ಬಂದ ಹಾಲುಗಲ್ಲದ ಕಂದ ಅಪ್ಪನ ಕಾರಿಗೇ ಸಿಕ್ಕಿ ಮೃತಪಟ್ಟಿದ್ದಾನೆ. ಚಿಕ್ಕಹೊಳೆ ಬಳಿಯ ಬೊಮ್ಮನಹಳ್ಳಿಯಲ್ಲಿ ಬುಧವಾರ ಈ ದುರ್ಘಟನೆ ನಡೆದಿದ್ದು, ಶಕ್ತಿವೇಲು ಅವರ ಒಂದು ವರ್ಷದ ಪುತ್ರ ರೋಹಿತ್​ ದುರ್ಮರಣಕ್ಕೀಡಾಗಿದ್ದಾನೆ.

ಹೊರಗಡೆ ಹೊರಟಿದ್ದ ಶಕ್ತಿವೇಲು ಶೆಡ್​ನಿಂದ ಕಾರು ತೆಗೆಯುವ ವೇಳೆ ಮಗು ಅಪ್ಪನನ್ನು ಹಿಂಬಾಲಿಸಿದೆ. ಮಗು ಬಂದದ್ದು ಗಮನಿಸದ ತಂದೆ ಕಾರನ್ನು ರಿವರ್ಸ್ ತೆಗೆದಿದ್ದಾರೆ. ಆ ವೇಳೆ ಅಲ್ಲೇ ಇದ್ದ ಮಗುವಿಗೆ ಕಾರು ಗುದ್ದಿದೆ.

ಕಾರು ಡಿಕ್ಕಿ ಹೊಡೆದ ರಭಸಕ್ಕೆ ತೀವ್ರ ಅಸ್ವಸ್ಥಗೊಂಡ ಮಗುವನ್ನು ಕೂಡಲೇ ತಾಳವಾಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸಲಿಲ್ಲ. ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net