More

    ಪತಿ-ಪತ್ನಿ ಇಬ್ಬರೂ ನೀರುಪಾಲು: ಮೂರು ವರ್ಷದ ಮಗು ಅನಾಥ

    ಚಾಮರಾಜನಗರ: ತಾಲೂಕಿನ ಚುಂಗಡಿಪುರ ಗ್ರಾಮದ ಬಳಿಯ ನಾಲೆಯಲ್ಲಿ ದಂಪತಿ ಕೊಚ್ಚಿಹೋಗಿದ್ದು, ಅವರ ಮೂರು ವರ್ಷದ ಮಗು ಈಗ ಅನಾಥವಾಗಿದೆ.

    ಪೂರ್ಣಿಮಾ (27)ಎಂಬಾಕೆ ಆಲ್ದೂರಿನ ತವರು ಮನೆಯಿಂದ ಮಂಗಳವಾರ ಮಧ್ಯಾಹ್ನ ದೇಮಹಳ್ಳಿಗೆ ಪತಿ ಕೆಂಪಣ್ಣ (37) ಜತೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕಬಿನಿ ಬಲದಂಡೆ ನಾಲೆಗೆ ಜಿಗಿದಿದ್ದಳು. ತಕ್ಷಣವೇ ಬೈಕ್ ನಿಲ್ಲಿಸಿದ ಕೆಂಪಣ್ಣ, ಇವಳನ್ನು ಕಾಪಾಡಲು ತಾನೂ ನೀರಿಗೆ ಧುಮುಕಿದ್ದ.

    ಆದರೆ ದುರದೃಷ್ಟವಶಾತ್ ಇಬ್ಬರೂ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಅವರ ಮೂರು ವರ್ಷದ ಮಗು ಋತ್ವಿಕ್ ಮಾತ್ರ ಬೈಕ್ ಮೇಲೆ ಕುಳಿತು ಪೋಷಕರು ನೀರು ಪಾಲಾದ ಘಟನೆಯನ್ನು ಅಸಹಾಯಕತೆಯಿಂದ ನೋಡುತ್ತಿದ್ದ!

    ಇದನ್ನೂ ಓದಿ    Fact Check| ಆರು ವರ್ಷದ ಹಳೆಯ ಫೋಟೋ ಲಾಕ್​ಡೌನ್​ ಸಮಯದಲ್ಲಿ ಸಂಚಲನ ಸೃಷ್ಟಿಸಿತು!

    ಇದೇ ವೇಳೆ ಜಮೀನಿಗೆ ಹೋಗುತ್ತಿದ್ದ ಭೋಜರಾಜು ಎನ್ನುವವರು ಇದನ್ನು ಗಮನಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಅಷ್ಟೊತ್ತಿಗಾಗಲೇ ಅಕ್ಕಪಕ್ಕದ ಗ್ರಾಮಗಳಿಗೂ ಸುದ್ದಿ ಹರಡಿ ಜನರು ನಾಲೆ ಬಳಿ ಜಮಾಯಿಸಿದರು. ಸಂಜೆವರೆಗೂ ಅಗ್ನಿಶಾಮಕದಳದವರು ಮತ್ತು ಈಜುಪಟುಗಳು ಹುಡುಕಿದರೂ ಮೃತದೇಹಗಳು ಸಿಕ್ಕಿರಲಿಲ್ಲ.

    ಬುಧವಾರ ಬೆಳಗ್ಗೆಯಿಂದ ಮತ್ತೆ ಹುಡುಕಾಟ ಆರಂಭಿಸಿದಾಗ ಪೂರ್ಣಿಮಾ ಮೃತದೇಹ ಚುಂಗಡೀಪುರದ ಬಳಿ ಪತ್ತೆಯಾಗಿದೆ.

    ಕೆಂಪಣ್ಣನ ಮೃತದೇಹದ ಹುಡುಕಾಟ ಮುಂದುವರೆದಿದೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ದಂಪತಿ ಮಧ್ಯೆ ಕಲಹ ಇರಲಿಲ್ಲ, ಅನ್ಯೋನ್ಯವಾಗಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮಗುವನ್ನು ಅದರ ಅಜ್ಜಿ-ತಾತನ ಸುಪರ್ದಿಗೆ ಒಪ್ಪಿಸಿದ್ದಾರೆ.

    ಬೇಬಿ ಪೌಡರ್​ನಿಂದ ಕ್ಯಾನ್ಸರ್​ ವಿವಾದ; ಅಮೆರಿಕ, ಕೆನಡಾದಲ್ಲಿ ಮಾರಾಟ ನಿಲ್ಲಿಸಿದ ಜಾನ್​ಸನ್​ ಆ್ಯಂಡ್​ ಜಾನ್​ಸನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts