ಅಪ್ಪನ ಜೊತೆ ಮಲಗಿದ್ದ ಒಂದು ಮಗುವನ್ನು ಕಚ್ಚಿ ಕೊಂದ ಬೀದಿ ನಾಯಿಗಳು!

dog
Published on

ಹೈದರಾಬಾದ್: ಗುಡಿಸಲಿನ ಒಳಗೆ ತಂದೆಯ ಜತೆ ಮಲಗಿದ್ದ ಒಂದು ವರ್ಷದ ಮಗುವನ್ನು ಬೀದಿ ನಾಯಿಗಳ ಗುಂಪು ಕಚ್ಚಿ ಸಿಗಿದು ತಿಂದು ಹಾಕಿದ ಎದೆ ನಡುಗಿಸುವ ಘಟನೆ ತೆಲಂಗಾಣದ ಶಂಶಾಬಾದ್‌ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಂಶಾಬಾದ್‌ನಲ್ಲಿ ಗುರುವಾರ ನಸುಕಿನಲ್ಲಿ ಮಗುವಿನ ತಂದೆ ಮತ್ತು ಇತರ ಕುಟುಂಬ ಸದಸ್ಯರು ಶಂಶಾಬಾದ್‌ನ ತಮ್ಮ ಗುಡಿಸಲಿನಲ್ಲಿ ಮಲಗಿದ್ದಾಗ ಈ ಘಟನೆ ಸಂಭವಿಸಿದೆ. ಅಂಬೆಗಾಲಿಡುವ ಮಗು ಹೇಗೆ ಗುಡಿಸಲು ಬಿಟ್ಟಿತು ಎಂಬುದು ಸ್ಪಷ್ಟವಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷದ ಮಾರ್ಚ್ ತಿಂಗಳಿನಿಂದ ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿಯ ಬಗ್ಗೆ ವರದಿಯಾಗಿರುವ 9ನೇ ಪ್ರಕರಣ ಇದಾಗಿದೆ. ಹೈದರಾಬಾದ್ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಬಗ್ಗೆ ಸಾರ್ವಜಿಕರಿಂದ ನಿರಂತರ ದೂರು ಬರುತ್ತಿವೆ. ಮಗುವಿನ ತಂದೆ ಕೆ ಸೂರ್ಯ ಕುಮಾರ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಆರ್‌ಜಿಐ ಏರ್‌ಪೋರ್ಟ್ ಇನ್‌ಸ್ಪೆಕ್ಟರ್ ಕೆ ಬಾಲರಾಜು ತಿಳಿಸಿದ್ದಾರೆ.

ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಸೂರ್ಯ ಕುಮಾರ್ ಅವರು ಶಂಶಾಬಾದ್ ಪಟ್ಟಣದ ರಾಜೀವ್ ಗೃಹಕಲ್ಪ ಸಂಕೀರ್ಣದ ಸಮೀಪ ನಿರ್ಮಿಸಿರುವ ತಾತ್ಕಾಲಿಕ ಗುಡಿಸಲಿನಲ್ಲಿ ವಾಸವಿದ್ದರು. ಬುಧವಾರ ರಾತ್ರಿ ಅವರು ತಮ್ಮ ಒಂದು ವರ್ಷದ ಮೊದಲ ಮಗ ಕೆ ನಾಗರಾಜು, 20 ತಿಂಗಳ ನವಜಾತ ಶಿಶು ಹಾಗೂ ಕುಟುಂಬದ ಇತರರೆ ಸದಸ್ಯರ ಜತೆ ಗುಡಿಸಲಿನಲ್ಲಿ ಮಲಗಿದ್ದರು. ಆದರೆ ಇತ್ತೀಚೆಗಷ್ಟೇ ಎರಡನೇ ಮಗುವಿಗೆ ಜನ್ಮ ನೀಡಿದ್ದ ಸೂರ್ಯಕುಮಾರ್ ಪತ್ನಿ ಘಟನೆ ನಡೆದಾಗ ಅಲ್ಲಿ ಇರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net