ವರ್ಷದ ಹರ್ಷೋತ್ಸವ; ರಾಜ್ಯ ಸರ್ಕಾರಕ್ಕೆ ಸಂಭ್ರಮ; ಕಾವೇರಿಯಲ್ಲಿ ಹಬ್ಬ

Front-1
Published on

ಬೆಂಗಳೂರು: ಬಹು ಒತ್ತಾಸೆ, ಕಸರತ್ತಿನೊಂದಿಗೆ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ವರ್ಷ ತುಂಬಿದ ಸಂಭ್ರಮಕ್ಕೆ ಅವರ ಅಧಿಕೃತ ನಿವಾಸ ಕಾವೇರಿ ಭಾನುವಾರ ಸಾಕ್ಷಿಯಾಯಿತು. ಅದ್ಧೂರಿ ಸಮಾರಂಭ, ಜನಬಲ ಪ್ರದರ್ಶನದ ಕಾರ್ಯಕ್ರಮಗಳನ್ನು ಕರೊನಾ ಕಸಿದುಕೊಂಡರೂ ಕಾರ್ಗಿಲ್ ವಿಜಯ ದಿವಸವನ್ನು ಸರಳವಾಗಿ ಆಚರಿಸಿ, ಯೋಧರ ಶೌರ್ಯ, ಸಾಹಸ ಮತ್ತು ಪ್ರಾಣ ತ್ಯಾಗ ಮಾಡಿದವರನ್ನು ಸ್ಮರಿಸಿ ಸಿಎಂ ಗೌರವಾರ್ಪಣೆ ಮಾಡಿದರು. ಬೆಳಗ್ಗೆಯಿಂದಲೇ ಸಚಿವರೆಲ್ಲರೂ ಕಾವೇರಿಗೆ ಬಂದು ಮುಖ್ಯಮಂತ್ರಿಯನ್ನು ಅಭಿನಂದಿಸಿ ಶುಭಾಶಯ ವಿನಿಮಯ ಮಾಡಿಕೊಂಡರು. ಮುಂದೆ ಯಾವ ರೀತಿ ಕಾರ್ಯನಿರ್ವಹಿಸಬೇಕೆಂದು ಪ್ರಮುಖ ಸಚಿವರಿಗೆ ಸಿಎಂ ಮಾರ್ಗದರ್ಶನ ನೀಡಿದರು.

ಎಲ್ಲರೊಂದಿಗೂ ಅಂತರ ಕಾಪಾಡಿಕೊಂಡು ಶುಭಾಶಯ ತಿಳಿಸಿ, ಮಾಸ್ಕ್​ನೊಂದಿಗೆ ಫೋಟೊ ಸೆಷನ್​ನಲ್ಲಿ ಭಾಗಿಯಾದರು. ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಸಚಿವರಾದ ಆರ್. ಅಶೋಕ್, ಬಸವರಾಜ ಬೊಮ್ಮಾಯಿ, ಎಸ್.ಟಿ. ಸೋಮಶೇಖರ್ ಸಂಭ್ರಮದಲ್ಲಿ ಭಾಗಿಯಾದರು.

ನಮ್ಮ ಸರ್ಕಾರ ಪ್ರವಾಹ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಳ್ಳಲು 5 ಲಕ್ಷ ರೂ. ಕೊಟ್ಟಿದೆ. ಜತೆಗೆ ಕಾರ್ವಿುಕರಿಗೆ, ಬಡವರಿಗೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಲೆಲ್ಲ ಸವಾಲುಗಳೇ ಬರುತ್ತವೆ. | ಆರ್. ಅಶೋಕ್ ಕಂದಾಯ ಸಚಿವ https://www.vijayavani.net/in-suicide-note-aged-couple-wish-to-be-cremated-by-cops/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net