ಕಾರು ಡಿಕ್ಕಿ ಹೊಡೆದು ಒಬ್ಬ ಸಾವು

22-GPT-2
ಗುಂಡ್ಲುಪೇಟೆ ತಾಲೂಕಿನ ಸುಲ್ತಾನ್ ಭತ್ತೇರಿ ರಸ್ತೆಯಲ್ಲಿ ರಸ್ತೆ ಬದಿಯ ತರಕಾರಿ ಅಂಗಡಿ ಮುಂದೆ ನಿಂತಿದ್ದವರಿಗೆ ಡಿಕ್ಕಿಹೊಡೆದ ಕಾರು ಹಾಗೂ ಅಪಘಾತದಲ್ಲಿ ನಜ್ಜುಗುಜ್ಜಾದ ತರಕಾರಿ ಅಂಗಡಿ.
Published on

ಗುಂಡ್ಲುಪೇಟೆ: ರಸ್ತೆಯ ಬದಿಯಲ್ಲಿ ನಿಂತಿದ್ದವರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಮದ್ದಯ್ಯನಹುಂಡಿ ಗ್ರಾಮದ ನಿಂಗಶೆಟ್ಟಿ(50) ಮೃತರು. ರಸ್ತೆ ಬದಿಯ ಅಂಗಡಿಯಲ್ಲಿ ಶುಕ್ರವಾರ ತರಕಾರಿ ಕೊಳ್ಳುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದಿದ್ದು, ಅಂಗಡಿಯಲ್ಲಿದ್ದ ಚಿಕ್ಕಶೆಟ್ಟಿ, ಮಾದಶೆಟ್ಟಿ ಹಾಗೂ ಕಾಶಿ ಗಂಭೀರವಾಗಿ ಗಾಯಗೊಂಡಿದ್ದರು.

ಕೂಡಲೇ ಇವರನ್ನು ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗಮಧ್ಯೆ ನಿಂಗಶೆಟ್ಟಿ ಮೃತಪಟ್ಟಿದ್ದಾರೆ. ಅಪಘಾತ ನಡೆಸಿದ ಕಾರಿನ ಚಾಲಕ ಮದ್ದೂರು ಕಾಲನಿಯ ರವಿ ಎಂದು ತಿಳಿದುಬಂದಿದ್ದು, ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ಕಾರನ್ನು ವಶಕ್ಕೆ ಪಡೆದಿರುವ ಪಟ್ಟಣ ಠಾಣೆ ಪೊಲೀಸರು ರವಿ ಪತ್ತೆಗೆ ಬಲೆ ಬೀಸಿದ್ದಾರೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಎಸ್‌ಐ ಸಾಹೇಬಗೌಡ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net