ಮೇ 1ರಿಂದ ‘ಒಂದು ದೇಶ ಒಂದೇ ಆರ್​ಆರ್​ಬಿ’

ವಿಜಯವಾಣಿ (1)
Published on

ನವದೆಹಲಿ: ಕಾರ್ಯದಕ್ಷತೆ ಹೆಚ್ಚಿಸಿ ವೆಚ್ಚವನ್ನು ತರ್ಕಬದ್ಧಗೊಳಿಸುವ ಉದ್ದೇಶದಿಂದ 11 ರಾಜ್ಯಗಳಲ್ಲಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​ಗಳನ್ನು ವಿಲೀನಗೊಳಿಸಲು ಕೇಂದ್ರ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ‘ಒಂದು ದೇಶ ಒಂದೇ ಆರ್​ಆರ್​ಬಿ’ ಪರಿಕಲ್ಪನೆ ಮೇ 1ಕ್ಕೆ ಸಾಕಾರಗೊಳ್ಳಲಿದೆ.

ವಿಲೀನದ ನಾಲ್ಕನೇ ಸುತ್ತಿನ ಈ ಪ್ರಕ್ರಿಯೆಯ ಅನುಷ್ಠಾನದೊಂದಿಗೆ ಆರ್​ಆರ್​ಬಿಗಳ ಸಂಖ್ಯೆ ಈಗಿರುವ 43ರಿಂದ 28ಕ್ಕೆ ಇಳಿಯಲಿದೆ. ಏಪ್ರಿಲ್ 5ರಂದು ಹೊರಡಿಸಿರುವ ಗೆಜೆಟ್ ಅಧಿಸೂಚನೆ ಪ್ರಕಾರ, ಕರ್ನಾಟಕ, ಆಂಧ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಗುಜರಾತ್, ಜಮ್ಮು-ಕಾಶ್ಮೀರ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ ಈ 11 ರಾಜ್ಯಗಳಲ್ಲಿರುವ ಆರ್​ಆರ್​ಬಿಗಳನ್ನು ವಿಲೀನಗೊಳಿಸಲಾಗುವುದು.

ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ 3 ಆರ್​ಆರ್​ಬಿಗಳನ್ನು ವಿಲೀನಗೊಳಿಸಿ ಒಂದು ಆರ್​ಆರ್​ಬಿ ರೂಪಿಸಲಾಗುತ್ತದೆ. ಕರ್ನಾಟಕ ಸೇರಿದಂತೆ 8 ರಾಜ್ಯಗಳಲ್ಲಿ 2 ಆರ್​ಆರ್​ಬಿಗಳನ್ನು ವಿಲೀನಗೊಳಿಸಿ ಒಂದು ಆರ್​ಆರ್​ಬಿ ರಚಿಸಲಾಗುತ್ತದೆ. ಇದು ವಿವಿಧ ರಾಜ್ಯಗಳಿಗೆ ಭಿನ್ನವಾಗಿರುತ್ತದೆ. ಇವು 2 ಸಾವಿರ ಕೋಟಿ ರೂ.ಗಳ ಅಧಿಕೃತ ಬಂಡವಾಳ ಹೊಂದಿರುತ್ತವೆ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net