ರಾಜ್ಯದಲ್ಲಿ ಪತ್ತೆಯಾಯ್ತು ಮತ್ತೊಂದು ಡೆಲ್ಟಾ ಪ್ಲಸ್ ಪ್ರಕರಣ! ಎರಡು ತಿಂಗಳ ಹಿಂದಿನ ಸ್ಯಾಂಪಲ್​ನಲ್ಲಿ ಸೋಂಕು ದೃಢ

delta
Published on

ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಡೆಲ್ಟಾ ಪ್ಲಸ್ ಪ್ರಕರಣ ಪತ್ತೆಯಾಗಿದ್ದು, ಇದರೊಂದಿಗೆ ಡೆಲ್ಟಾ ಪ್ಲಸ್ ಪ್ರಕರಣಗಳ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.


ಬೆಂಗಳೂರಿನ ನಂದಿನಿಲೇಔಟ್​ನ 60 ವರ್ಷದ ವೃದ್ದೆಯಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು ಪತ್ತೆಯಾಗಿದೆ.


ಹೋಮ್ ಐಸೋಲೇಷನ್​ನಲ್ಲೇ ಇದ್ದು ಗುಣಮುಖ ಆಗಿರುವ ವೃದ್ಧೆಯ ಎರಡು‌ ತಿಂಗಳ ಹಿಂದಿನ ಸ್ಯಾಂಪಲ್​ನ ಫಲಿತಾಂಶ ಈಗ‌ ಲಭ್ಯವಾಗಿದೆ. ಹೀಗಾಗಿ ಆತಂಕ ಪಡುವ ಅಗತ್ಯ ಇಲ್ಲ. ವೃದ್ಧೆಯ ಮನೆಯ 100 ಮೀಟರ್ ವ್ಯಾಪ್ತಿಯಲ್ಲಿ 50 ಮಂದಿಯ ಸ್ಯಾಂಪಲ್ ಟೆಸ್ಟ್​ಗೆ ಕಳಿಸಲಾಗಿದೆ. ನಾಳೆ ಎಲ್ಲರ ಪರೀಕ್ಷಾ ವರದಿ ಲಭ್ಯವಾಗಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net