More

    ರಾಜ್ಯದಲ್ಲಿ ಇಂದು ಪತ್ತೆಯಾದ ಕರೊನಾ ಪ್ರಕರಣಗಳ ಸಂಖ್ಯೆ ಎಷ್ಟು? ಮತ್ತೆ ಏರಿಕೆಯಾಯ್ತಾ ಮರಣ ಪ್ರಮಾಣ?

    ಬೆಂಗಳೂರು: ರಾಜ್ಯದಲ್ಲಿ ಕರೊನಾದ ಎರಡನೇ ಅಲೆಯ ಅಬ್ಬರ ಕಡಿಮೆಯಾಗುತ್ತಿದ್ದು, ಇಂದು ಒಂದೇ ದಿನದಲ್ಲಿ 1,386 ಪ್ರಕರಣಗಳು ದೃಢವಾಗಿವೆ. 24 ಗಂಟೆಗಳಲ್ಲಿ 61 ಸೋಂಕಿತರು ಸಾವನ್ನಪ್ಪಿದ್ದು, ಇಂದಿನ ಕರೊನಾ ಮರಣ ಪ್ರಮಾಣ ಶೇ. 4.40ರಷ್ಟು ವರದಿಯಾಗಿದೆ.


    ಈ ದಿನ ರಾಜ್ಯದಲ್ಲಿ ಪತ್ತೆಯಾದ ಪ್ರಕರಣಗಳನ್ನು ಸೇರಿ ಒಟ್ಟಾರೆ ಪ್ರಕರಣಗಳ ಸಂಖ್ಯೆ 28,72,684ಕ್ಕೆ ಏರಿಕೆಯಾಗಿದೆ. ಇಂದು 3,204 ಸೋಂಕಿತರು ಗುಣಮುಖವಾಗಿ ಡಿಸ್ಚಾರ್ಜ್ ಆಗಿದ್ದು, ಒಟ್ಟಾರೆ ಗುಣಮುಖರ ಸಂಖ್ಯೆ 28,01,907ಕ್ಕೆ ಹೆಚ್ಚಿದೆ. 34,858 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. ಮೃತರ ಸಂಖ್ಯೆ 35,896ಕ್ಕೆ ಏರಿದೆ. ಇಂದಿನ ಕರೊನಾ ಪಾಸಿಟಿವಿಟಿ ಪ್ರಮಾಣ ಶೇ. 1.26ರಷ್ಟಿದೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ತಿಳಿಸಿದೆ.


    ಬೆಂಗಳೂರು ನಗರ ಜಿಲ್ಲೆಯಲ್ಲಿ 319 ಪ್ರಕರಣಗಳು ಕಾಣಿಸಿಕೊಂಡಿವೆ. ಉಳಿದಂತೆ ಮೈಸೂರಿನಲ್ಲಿ 177, ದಕ್ಷಿಣ ಕನ್ನಡ 126, ಹಾಸನದಲ್ಲಿ 108 ಪ್ರಕರಣಗಳು ದೃಢವಾಗಿವೆ. ಬಾಗಲಕೋಟೆ, ಬೀದರ್, ಚಿಕ್ಕಬಳ್ಳಾಪುರ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಸೋಂಕಿತರ ಸಂಖ್ಯೆ ಒಂದಂಕಿಗೆ ಇಳಿದಿದೆ. ರಾಯಚೂರಿನಲ್ಲಿ ಒಂದೇ ಒಂದು ಪ್ರಕರಣ ಪತ್ತೆಯಾಗಿದ್ದು, ಇಂದು ಅತಿ ಕಡಿಮೆ ಪ್ರಕರಣ ಕಾಣಿಸಿಕೊಂಡ ಜಿಲ್ಲೆ ಅದಾಗಿದೆ. (ಏಜೆನ್ಸೀಸ್)

    21 ವರ್ಷದ ಯುವತಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ! ಡಿಗ್ರಿ ಓದುವಾಗಲೇ ರಾಜಕೀಯಕ್ಕಿಳಿದ ವಿದ್ಯಾರ್ಥಿನಿ

    ಬಿಗ್​ಬಾಸ್ ಮನೆಯಿಂದ ಹೊರಬಂದ ರಘು ಮೊದಲು ಭೇಟಿ ಆಗೋದು ಯಾರನ್ನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts