More

    ಬಿಗ್​ಬಾಸ್ ಮನೆಯಿಂದ ಹೊರಬಂದ ರಘು ಮೊದಲು ಭೇಟಿ ಆಗೋದು ಯಾರನ್ನ?

    ಬೆಂಗಳೂರು: ರಘುವೈನ್​ ಸ್ಟೋರ್ ಖ್ಯಾತಿಯ ರಘು ಗೌಡ ಕನ್ನಡದ ಬಿಗ್​ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ಬಿಗ್​ಬಾಸ್ ಸೀಸನ್ 8ರ ಎರಡನೇ ಇನ್ನಿಂಗ್ಸ್​ನಲ್ಲಿ ಮನೆಯಿಂದ ಹೊರಬಂದ ಎರಡನೇ ಸ್ಪರ್ಧಿ ಅವರಾಗಿದ್ದಾರೆ. ಮನೆಯಿಂದ ಹೊರಬಂದಾಕ್ಷಣ ಇನ್​ಸ್ಟಾಗ್ರಾಂನಲ್ಲಿ ಆ್ಯಕ್ಟಿವ್ ಆದ ಅವರು ತಾವು ಮೊದಲು ಯಾರ ಮನೆಗೆ ಹೋಗುತ್ತೇನೆ ಎನ್ನುವುದನ್ನೂ ಬಹಿರಂಗಪಡಿಸಿದ್ದಾರೆ.

    ನಿಮಗೆಲ್ಲರಿಗೂ ಗೊತ್ತಿರುವಂತೆ ರಘು ಬಿಗ್​ಬಾಸ್ ಮನೆಯಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ ಹೆಚ್ಚು ಆ್ಯಕ್ಟಿವ್ ಇರಲಿಲ್ಲವಾದರೂ ಎರಡನೇ ಇನ್ನಿಂಗ್ಸ್​ನಲ್ಲಿ ರೊಚ್ ರಘು ಆಗಿ ಸಖತ್ ಆ್ಯಕ್ಟಿವ್ ಆಗಿದ್ದರು. ಯಾರೊಂದಿಗೂ ಮನಸ್ಥಾಪ ಮಾಡಿಕೊಳ್ಳದೆ ಎಲ್ಲರೊಂದಿಗೆ ಖುಷಿಯಿಂದಲೇ ಇದ್ದರು. ಅದರಲ್ಲೂ ಅಗ್ನಿಸಾಕ್ಷಿ ವೈಷ್ಣವಿ ಜತೆಗಂತೂ ಹೆಚ್ಚಾಗಿಯೇ ಕಾಣಿಸಿಕೊಳ್ಳುತ್ತಿದ್ದರು.

    ರಘು ಮನೆಯಿಂದ ಹೊರಬಂದ ತಕ್ಷಣ ಮೊದಲು ಯಾರನ್ನು ಭೇಟಿ ಮಾಡುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇತ್ತು. ಅದಕ್ಕೆ ಉತ್ತರಿಸಿರುವ ರಘು ತಾವು ಮೊದಲು ನಿಧಿ ಸುಬ್ಬಯ್ಯ ಅವರನ್ನು ಭೇಟಿ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಬೈಕ್​ನೊಂದಿಗೆ ತಾವು ರಸ್ತೆಯಲ್ಲಿ ಕುಳಿತಿರುವ ಫೋಟೋವೊಂದನ್ನು ಹಂಚಿಕೊಂಡಿರುವ ಅವರು, ನನ್ನ ಮುಂದಿನ ಪ್ರಯಾಣ ಮೈಸೂರಿನ ಕಡೆಗೆ. ನಿಧಿ ಅವರೇ ನಿಮ್ಮ ಅಮ್ಮನಿಗೆ ಹೇಳಿ ರುಚಿಯಾದ ಅಡುಗೆಗಳನ್ನು ಮಾಡಿಸಿಡಿ ಎಂದು ಬರೆದುಕೊಂಡಿದ್ದಾರೆ.

    ರಘು ಪೋಸ್ಟ್​ ನೋಡಿದ ನಿಧಿ ಖುಷಿಯಿಂದ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ. ಹಹಹ, ರಘು ಬೇಗ ಬನ್ನಿ. ಅಮ್ಮ ನಿಮಗಾಗಿ ಚಿಲ್ಲಿ ಪೋರ್ಕ್ ಮಾಡ್ತಾರಂತೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ಪೋಸ್ಟ್​ಗೂ ಮೊದಲು ರಘು ಇನ್ನೊಂದು ಪೋಸ್ಟ್ ಮಾಡಿದ್ದು, ಬಿಗ್​ಬಾಸ್ ಜರ್ನಿಯಲ್ಲಿ 91 ಪೂರೈಸಲು ಬೆನ್ನೆಲುಬಾಗಿದ್ದ ತಮ್ಮ ಹೆಂಡತಿಗೆ ಧನ್ಯವಾದ ತಿಳಿಸಿದ್ದಾರೆ.

    ರಘು ಮನೆಗೆ ವಾಪಸಾಗುತ್ತಾರೆ ಎನ್ನುವುದು ತಿಳಿದ ತಕ್ಷಣ ಮನೆಯಲ್ಲಿ ಸಂಭ್ರಮದ ವಾತಾವರಣ ಏರ್ಪಟ್ಟಿತ್ತು. ಪಟಾಕಿ ಹೊಡೆದು ಅದ್ಧೂರಿಯಾಗಿ ವೆಲ್​ಕಮ್ ಮಾಡಲಾಗಿದೆ. ವೆಲ್​ಕಮ್​ ಬ್ಯಾಕ್​ ಎಂದು ಹೇಳಿ ಕೇಕ್​ ಕತ್ತರಿಸಿ ಸಂತೋಷ ಹಂಚಿಕೊಳ್ಳಲಾಗಿದೆ. ಅದರ ಫೋಟೋಗಳನ್ನು ರಘು ತಮ್ಮ ಇನ್​ಸ್ಟಾಗ್ರಾಂ ಖಾತೆಯ ಸ್ಟೋರಿಗಳಾಗಿ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)

    ವಾಟ್ಸ್​ಆ್ಯಪ್​ ವಿಡಿಯೋ ಕಾಲ್​ನಲ್ಲೇ ಡೇಟಾ ಪೂರ್ತಿ ಖಾಲಿಯಾಗುತ್ತಿದೆಯೇ? ಡೇಟಾ ಬಳಕೆ ಕಡಿಮೆಯಾಗಲು ಹೀಗೆ ಮಾಡಿ..

    ಈ ವಾರ ಪ್ರಕಟವಾಗಲ್ಲ ಸಿಬಿಎಸ್​ಇ ರಿಸಲ್ಟ್​; ಅಂಕ ಸಲ್ಲಿಕೆಯಲ್ಲಿ ಶಾಲೆಗಳ ವಿಳಂಬ

    ಕ್ಯಾನ್ಸರ್​ನಿಂದ ಬಳಲುತ್ತಿದ್ದ ನಾಯಿಯನ್ನು ಟ್ರಿಪ್​ ಕರೆದೊಯ್ದು ಅಂತಿಮ ಆಸೆ ಪೂರೈಸಿದ ಮಾಲೀಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts