ಮತ್ತೊಬ್ಬ ನಟಿ ಅರೆಸ್ಟ್​; ಮತ್ತೆ ಸದ್ದು ಮಾಡುತ್ತಿರುವ ಡ್ರಗ್ಸ್ ಮಾರಾಟ ಪ್ರಕರಣ

Untitled-1
Published on

ಬೆಂಗಳೂರು: ಡ್ರಗ್ಸ್​ ಮಾರಾಟ ಜಾಲದಲ್ಲಿ ಈಗಾಗಲೇ ಹಲವಾರು ನಟಿಯರು ಹೆಸರು ಕೇಳಿಬಂದಿದ್ದು, ಸ್ಯಾಂಡಲ್​ವುಡ್​ನಲ್ಲಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ ಮುಂತಾದವರೆಲ್ಲ ಬಂಧನಕ್ಕೆ ಒಳಗಾಗಿದ್ದೆಲ್ಲ ಜನರು ಮರೆತು ಹೋಗಿರಬಹುದು ಎಂಬಷ್ಟರಲ್ಲಿ ಈಗ ಮತ್ತೊಬ್ಬ ನಟಿ ಬಂಧನಕ್ಕೆ ಒಳಗಾಗಿದ್ದಾರೆ.

ಮುಂಬೈನ ಮಾದಕ ವಸ್ತು ನಿಯಂತ್ರಣ (ಎನ್​ಸಿಬಿ) ವಿಭಾಗದ ಪೊಲೀಸರ ಕಾರ್ಯಾಚರಣೆ ವೇಳೆ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಅರ್ಥಾತ್ 400 ಗ್ರಾಮ್​ನಷ್ಟು ಮಾದಕ ವಸ್ತು ಸಿಕ್ಕಿದ್ದು, ಪೊಲೀಸರು ಹೈದರಾಬಾದ್​ನಲ್ಲಿ ನಟಿಯೊಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕೆಲವು ಸಮಯದಿಂದ ಸಿನಿಮಾ ಚಟುವಟಿಕೆಯಿಂದ ದೂರವಿದ್ದು ಸುದ್ದಿಯಲ್ಲಿರದ ಈ ನಟಿಯ ಹೆಸರು ಈಗ ಡ್ರಗ್ಸ್​ ಪ್ರಕರಣದಿಂದಾಗಿ ಮುನ್ನೆಲೆಗೆ ಬರುವಂತಾಗಿದೆ.

ನಟಿ ಶ್ವೇತಾ ಕುಮಾರಿ

ಅಂದಹಾಗೆ ಈಕೆ ತೆಲುಗು ಚಿತ್ರರಂಗದ ನಟಿ ಶ್ವೇತಾ ಕುಮಾರಿ. ತೆಲುಗಿನ ನಾಲ್ಕು ಸಿನಿಮಾಗಳಲ್ಲಿ ಎರಡನೇ ನಾಯಕಿಯಾಗಿ ಅಭಿನಯಿಸಿದ್ದ ಇವರ ಹೆಸರು ಮುಂಬೈ ಡ್ರಗ್ಸ್ ಜಾಲ ಪ್ರಕರಣದಲ್ಲಿ ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು. ಈಕೆ ಕನ್ನಡದಲ್ಲೂ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ ಎನ್ನಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಪೊಲೀಸರು ಈ ನಟಿಯನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದ್ದು, ಆ ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net