ಸಾಲ ವಾಪಸ್​ ಕೊಡುವಂತೆ ಒತ್ತಡ ಹೇರಿದ್ದಕ್ಕೆ ಅಪ್ರಾಪ್ತರಿಂದ Firing; ಓರ್ವ ಸಾವು, ಇಬ್ಬರು ಗಂಭೀರ

Nadeem
Published on

ನವದೆಹಲಿ: ಕೊಟ್ಟಿರುವ ಸಾಲವನ್ನು ವಾಪಸ್​ ಕೊಡುವಂತೆ ಒತ್ತಡ ಹೇರಿದ್ದಕ್ಕೆ ಅಪ್ರಾಪ್ತ ವಯಸ್ಕರನೋರ್ವ ಯುವಕನನ್ನು ಗುಂಡಿಕ್ಕಿ (Firing)  ಕೊಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯ (Delhi) ಕಬೀರ್​ ನಗರದಲ್ಲಿ ನಡೆದಿದೆ.

ಮೃತರನ್ನು ನದೀಮ್​ ಎಂದು ಗುರುತಿಸಲಾಗಿದ್ದು, ನದೀಮ್​ (Nadeem) ಜೊತೆ ಗುಂಡೇಟು ತಿಂದಿದ್ದ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಮೂವರು ಅಪ್ರಾಪ್ತ ವಯಸ್ಕರನ್ನು (Minor Boys) ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

ಘಟನೆಯ ಕುರಿತು ಮಾಹಿತಿ ನೀಡಿರುವ ವೆಲ್​ಕಮ್​ ಪೊಲೀಸ್​ ಠಾಣೆಯ ಹಿರಿಯ ಅಧಿಕಾರಿಯೊಬ್ಬರು (Senior Police Officer), ನವೆಂಬರ್​ 08ರಂದು ನದೀಮ್​ ಮತ್ತು ಆತನ ಸ್ನೇಹಿತರು ಊಟಕ್ಕೆಂದು ಹೊರಗೆ ಹೊರಟಿದ್ದರು. ಈ ವೇಳೆ ಮೂವರು ಅಪ್ರಾಪ್ತರು ಬೈಕ್‌ನಲ್ಲಿ ಬಂದು 13 ಸುತ್ತು ಗುಂಡು ಹಾರಿಸಿ (Firing) ಪರಾರಿಯಾಗಿದ್ದರು.  ದಾಳಿಯಲ್ಲಿ ನದೀಮ್‌ ಮತ್ತು ಆತನ ಸ್ನೇಹಿತರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರು ಚಿಕಿತ್ಸೆ ಫಲಕಾರಿಯಾಗದೆ ನದೀಮ್​ ಮೃತಪಟ್ಟಿದ್ದಾನೆ. ಗುಂಡಿನ ದಾಳಿಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತ ವಯಸ್ಕರನ್ನು ಬಂಧಿಸಲಾಗಿದ್ದು, ಬಂಧಿತರ ಪೈಕಿ ಓರ್ವ ನದೀಮ್​ನಿಂದ ಸಾಲ ಪಡೆದಿದ್ದ. ಮರುಪಾವತಿಗೆ ಒತ್ತಡ ಹೇರಿದ್ದಕ್ಕೆ ಈ ಕೃತ್ಯ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಬಂಧಿತರಿಂದ ಮೂರು ನಾಡ ಪಿಸ್ತೂಲ್​ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವೆಲ್​ಕಮ್​ ಪೊಲೀಸ್​ ಠಾಣೆಯ ಹಿರಿಯ ಅಧಿಕಾರಿಯೊಬ್ಬರು (Senior Police Officer) ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net