

ಬೆಂಗಳೂರು: ನಗರದ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಸಂಭವಿಸಿದ್ದ ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಶಂಕಿತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ಧಾರೆ.
ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಶಂಕಿತನನ್ನು ವಶಕ್ಕೆ ಪಡೆಯಲಾಗಿದ್ದು, ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಉನ್ನತ ಸುದ್ದಿ ಮೂಲಗಳು ತಿಳಿಸಿವೆ.
ಕೆಫೆಯ ಒಳಗಡೆ ಸ್ಫೋಟಕವನ್ನು ಇರಿಸಿದ ಬಳಿಕ ಬಾಂಬರ್ ಬೈಕ್‌ನಲ್ಲಿ ತೆರಳಿದ್ದ. ಬೈಕ್ ನಂಬರ್ ಆಧರಿಸಿ ಮಾಲೀಕನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಕಪ್ಪು ಬ್ಯಾಗ್ ಬೆನ್ನಿಗೆ ಹಾಕಿಕೊಂಡು ಹೋಟೆಲಿಗೆ ಬಂದಿದ್ದ ಬಾಂಬರ್ಆಹಾರ ಸೇವಿಸಿದ ಬಳಿಕ ಹ್ಯಾಂಡ್‌ವಾಶ್ ಮಾಡುವ ಜಾಗದಲ್ಲಿ ಬ್ಯಾಗ್ ಇಟ್ಟು ಹೋಗಿದ್ದ. ಸಿಸಿಟಿವಿಯಲ್ಲಿಆರೋಪಿಯ ಪ್ರತಿಯೊಂದು ಚಲನವಲನ ಸೆರೆಯಾಗಿದ್ದು, ಪೊಲೀಸರು ಇದನ್ನು ಆಧಾರವಾಗಿರಿಸಿಕೊಂಡು ತನಿಖೆಯನ್ನು ಚುರುಕುಗೊಳಿಸಿದ್ದಾರೆ.