ಕೃಷ್ಣಾ ಕೊಳ್ಳದಲ್ಲಿ 5.18 ಕೋಟಿ ರೂ.ಗೆ ಒಂದು ಎಕರೆ ಜಮೀನು!

14012019 Krishna River Dry water
Published on

ಬೆಂಗಳೂರು: ಕೃಷ್ಣಾ 3ನೇ ಹಂತದ ಯೋಜನೆ ಅನುಷ್ಠಾನದ ಬಗ್ಗೆ ನಮಗೂ ಬದ್ಧತೆ ಇದೆ. ಆದರೆ, ಕೆಲವರು ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಕೆಲವರು ಕೋರ್ಟ್‌ಗೆ ಹೋಗಿ ಕೋಟಿ ಕೋಟಿ ಪರಿಹಾರದ ಆದೇಶ ತಂದಿದ್ದಾರೆ!

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಬಸನಗೌಡ ಪಾಟೀಲ ಯತ್ನಾಳ್ ಅವರ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಕೆಲವು ವಿಷಯಗಳನ್ನು ನನಗೆ ಇಲ್ಲಿ ರಿವ್ಹೀಲ್ ಮಾಡು ಗಾಬರಿಯಾಗುತ್ತದೆ. ಕೆಲವರು ಎಕರೆಗೆ 1.26 ಕೋಟಿ ರೂ. ಪರಿಹಾರದ ಆರ್ಡರ್ ತಂದಿದ್ದಾರೆ. ಇನ್ನೂ ಒಂದು ಪ್ರಕಣದಲ್ಲಿ 1 ಎಕರೆಗೆ 5.18 ಕೋಟಿ ಕೊಡುವಂತೆ ಆದೇಶವಾಗಿದೆ. ಸರ್ಕಾರಿ ವಕೀಲರು ಏನು ಮಾಡುತ್ತಿದ್ದಾರೆ? ನಮಗೆ ಅರ್ಥವೇ ಆಗುತ್ತಿಲ್ಲ. ಆ ಎಲ್ಲ ಸರ್ಕಾರಿ ವಕೀಲರನ್ನು ತೆಗೆದುಹಾಕಬೇಕಿದೆ ಎಂದರು.

ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಎಕರೆಗೆ 25 ಲಕ್ಷ ಕೊಡಲು ತೀರ್ಮಾನವಾಗಿತ್ತು. ಅಷ್ಟಾಚರೆ ಕೊಡೋಣ. ಆದರೆ, 1.25 ಕೋಟಿ ರೂ. ಎಂದರೆ ಎಲ್ಲಿಂದ ಕೊಡಲು ಆಗುತ್ತದೆ? ಇದು ಸಾಧ್ಯವೇ ಇಲ್ಲ ಎಂದು ಹೇಳಿದರು.

ಬಳಿಕ ಮಾತನಾಡಿದ ಬಸನಗೌಡ ಪಾಟೀಲ ಯತ್ನಾಳ್, ಎಲ್ಲಾದರೂ ತನ್ನಿ, ಹೇಗಾದರೂ ತನ್ನಿ 2 ವರ್ಷದಲ್ಲಿ 1.50 ಲಕ್ಷ ಕೋಟಿ ರೂ. ಅನುದಾನ ಕೊಟ್ಟು ಯೋಜನೆ ಪೂರ್ಣಗೊಳಿಸಿ ಎಂದು ಆಗ್ರಹಿಸಿದರು.

ಬಾಕ್ಸ್:

100 ವರ್ಷವಾದರೂ ಮುಗಿಯುವುದಿಲ್ಲ:

ಈಗ ನಿಗದಿಪಡಿಸುವ ಅನುದಾನದ ಪ್ರಮಾಣ ನೋಡಿದರೆ ಕೃಷ್ಣ 3ನೇ ಹಂತದ ಕಾಮಗಾರಿ 100 ವರ್ಷವಾದರೂ ಮುಗಿಯುವುದಿಲ್ಲ ಎಂದು ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ್ ಬೇಸರ ಹೊರ ಹಾಕಿದರು. ಕಾವೇರಿಗೆ 3105 ಕೋಟಿ ಇಟ್ಟಿದ್ದಾರೆ. ಕೃಷ್ಣೆಗೆ 4580 ಕೋಟಿ ಇಟ್ಟಿದ್ದಾರೆ. ಕಾವೇರಿಗೆ ಕೊಟ್ಟಿರುವ ಬಗ್ಗೆ ನಮ್ಮ ತಕರಾರಿಲ್ಲ. ಆದರೆ, ದೊಡ್ಡ ಯೋಜನೆಗೆ ಕಡಿಮೆ ಅನುದಾನ ಇಟ್ಟರೆ ಯೋಜನೆ ಮುಗಿಯುವುದಾದರೂ ಯಾವಾಗ? 100 ವರ್ಷವಾದರೂ ಮುಗಿಯುವುದಿಲ್ಲ ಎಂದು ಯತ್ನಾಳ್ ಆತಂಕ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net