ಪಹಲ್ಗಾಮ್ ಉಗ್ರರಿಗೆ ನೆರವು: ಓರ್ವ ಆರೋಪಿ ಬಂಧನ

2-68d425ffbeca8
Published on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದ ಭಯೋತ್ಪಾದಕರಿಗೆ ನೆರವು ನೀಡಿದ ಆರೋಪದ ಮೇಲೆ ಕುಲ್ಗಾಮ್ಲ್ಲಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಗುಪ್ತಚರ ಮಾಹಿತಿಯನ್ನು ಆಧರಿಸಿ ಶ್ರೀನಗರ ಪೊಲೀಸರು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಓವರ್ ಗ್ರೌಂಡ್ ವರ್ಕರ್​ನನ್ನು ಬಂಧಿಸಲಾಗಿದೆ.

ಬಂಧಿತನನ್ನು ಮೊಹಮ್ಮದ್ ಯೂಸುಫ್ ಕಟಾರಿ (26) ಎಂದು ಗುರುತಿಸಲಾಗಿದೆ. ಪಹಲ್ಗಾಮ್ಲ್ಲಿ ದಾಳಿ ನಡೆಸಿದ ಭಯೋತ್ಪಾದಕರಿಗೆ ನೆರವು ನೀಡುವಲ್ಲಿ ಈತನ ಪ್ರಮುಖ ಪಾತ್ರವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಪರೇಷನ್ ಮಹಾದೇವ್ ನಂತರ ಭದ್ರತಾ ಪಡೆಗಳಿಗೆ ಪಹಲ್ಗಾಮ್ ದಾಳಿ ಪ್ರಕರಣದಲ್ಲಿ ಸಿಕ್ಕ ಮೊದಲ ಗಮನಾರ್ಹ ಯಶಸ್ಸು ಇದಾಗಿದೆ. ಪಾಕಿಸ್ತಾನ ಮೂಲದ ಲಷ್ಕರ್ ಎ ತೋಯ್ಬಾ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.

ಮೇ 22 ರಂದು ಶ್ರೀನಗರ ಬಳಿಕ ಡಚಿಗಾಮ್ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಮಾಹಿತಿ ಅಧರಿಸಿ ಭದ್ರತಾ ಪಡೆಗಳು ದಾಳಿ ನಡೆಸಿದ್ದವು. ಈ ಎನ್​ಕೌಂಟರ್ ನಲ್ಲಿ ಪಹಲ್ಗಾಮ್ ದಾಳಿಯ ಮಾಸ್ಟರ್​ವೆುೖಂಡ್ ಎಂದು ಹೇಳಲಾಗಿರುವ ಸುಲೇಮಾನ್ ಶಾ ಅಲಿಯಾಸ್ ಹಾಶಿಮ್ ಮೂಸಾ ಸೇರಿದಂತೆ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net