ಮತ್ತೆ ಮೋದಿಯೇ ಜಾಗತಿಕ ನಾಯಕ: ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್

Modi
Published on
ಅಮೆರಿಕದ ಮಾರ್ನಿಂಗ್ ಕನ್ಸಲ್ಟ್ ಎಂಬ ಸಂಶೋಧನಾ ಸಂಸ್ಥೆ ’ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್’ ಪಟ್ಟಿ ಬಿಡುಗಡೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ 3ನೇ ಬಾರಿಯೂ ಆಗ್ರ ಸ್ಥಾನ ಕಾಯ್ದು ಕೊಂಡಿದ್ದಾರೆ. ಈ ಸಾರಿ ಅವರಿಗೆ ಶೇ. 72 ರೇಟಿಂಗ್ ಸಿಕ್ಕಿದೆ.
  • ಪ್ರಧಾನಿ ನರೇಂದ್ರ ಮೋದಿಗೆ 72%
  • ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಲೋಪೆಜ್ 64%
  • ಇಟಲಿ ಪ್ರಧಾನಿ ಮಾರಿಯೋ ಡಾಗ್ರಿ 57%
  • ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ 47%
  • ಜರ್ಮನಿ ಚಾನ್ಸಲರ್ ಓಲಾಫ್ ಸ್ಕೋಲ್ಜ 42%
  • ಅಮೆರಿಕ ಅಧ್ಯಕ್ಷ ಜೋ ಬೈಡೆನ್, ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ ಇನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಕೆನಡಾದ ಅಧ್ಯಕ್ಷ ಜಸ್ಟಿನ್ ಟ್ರುಡೊ 41.
  • ಸ್ಪೇನ್​ನ ಪ್ರಧಾನಿ ಪೆಡ್ರೊ ಸ್ಯಾಂಚೆಜ್ 37%
  • ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸನಾರೊ 36%
  • ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ 35%
  • ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ 30%

ಮಾರ್ನಿಂಗ್ ಕನ್ಸಲ್ಟ್ ರಾಜಕೀಯಕ್ಕೆ ಸಂಬಂಧಿಸಿದ ಗುಪ್ತ ಮಾಹಿತಿಯನ್ನು ವಿಶ್ಲೇಷಿಸುವ ಸಂಸ್ಥೆಯಾಗಿದ್ದು, ಅಧಿಕಾರಸ್ಥ ನಾಯಕರು ಮತ್ತು ದೇಶದ ಪಥ ಬದಲಿಸುವ ಮುಖಂಡರು ದೇಶದೊಳಗೆ ಮತ್ತು ಜಾಗತಿಕವಾಗಿ ಬೀರುವ ಪ್ರಭಾವವನ್ನು ಆಧರಿಸಿ ರೇಟಿಂಗ್ ಪಟ್ಟಿ ಮಾಡುತ್ತದೆ. ಈ ಪಟ್ಟಿಯಲ್ಲಿ 13 ದೇಶಗಳ ನಾಯಕರನ್ನು ವಿಶ್ಲೇಷಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net