ಚೀನಾದಲ್ಲಿ ಹೆಚ್ಚಾದ ಕರೊನಾತಂಕ; 2 ವರ್ಷದಲ್ಲೇ ಮತ್ತೆ ಅತ್ಯಧಿಕ ದೈನಂದಿನ ಕೋವಿಡ್ ಪ್ರಕರಣ

15_01_2022-coronaindoremp a
Published on

ನವದೆಹಲಿ: ಎರಡು ದಿನಗಳ ಹಿಂದೆ ಎರಡು ವರ್ಷದಲ್ಲೇ ಅತ್ಯಧಿಕ ದೈನಂದಿನ ಕರೊನಾ ಪ್ರಕರಣಕ್ಕೆ ಸಾಕ್ಷಿಯಾಗಿದ್ದ ಚೀನಾ, ಇಂದು ಮತ್ತೊಮ್ಮೆ ಎರಡು ವರ್ಷಗಳಲ್ಲೇ ಅತ್ಯಧಿಕ ದೈನಂದಿನ ಕರೊನಾ ಪ್ರಕರಣಕ್ಕೆ ಸಾಕ್ಷಿಯಾಗಿದೆ. ಈ ಮೂಲಕ ಚೀನಾದಲ್ಲಿ ಕರೊನಾ ದಿನೇದಿನೆ ಹೆಚ್ಚುತ್ತಿರುವುದು ಕಂಡುಬಂದಿದ್ದು, ಇನ್ನೊಮ್ಮೆ ಆತಂಕ ಆವರಿಸುವ ಲಕ್ಷಣಗಳು ಗೋಚರಿಸಿವೆ.

ಕರೊನಾ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಅಲ್ಲಿನ ಆಡಳಿತ ಸೂಕ್ತ ನಿರ್ಬಂಧ ಇತ್ಯಾದಿ ಕ್ರಮಗಳನ್ನು ಕೈಗೊಂಡಿದ್ದರೂ ಕರೊನಾ ನಿಯಂತ್ರಣಕ್ಕೆ ಸಿಗದೆ ಮತ್ತೆ ಹೆಚ್ಚಾಗಿದೆ. ಭಾನುವಾರ ಮೇನ್​ಲ್ಯಾಂಡ್ ಚೀನಾದಲ್ಲಿ ದಿನವೊಂದರ ಹೊಸ ಕರೊನಾ ಪ್ರಕರಣಗಳ ಸಂಖ್ಯೆ 1,807 ಆಗಿದ್ದು, ಇದು ಎರಡು ವರ್ಷಗಳಲ್ಲೇ ಅತ್ಯಧಿಕ ದೈನಂದಿನ ಪ್ರಕರಣ. ಮಾತ್ರವಲ್ಲ ಹಿಂದಿನ ದಿನ ಬರೀ 476ರಷ್ಟಿದ್ದ ದೈನಂದಿನ ಕರೊನಾ ಪ್ರಕರಣ ಸಂಖ್ಯೆ ಒಂದೇ ದಿನದಲ್ಲಿ ಮೂರು ಪಟ್ಟಿಗೂ ಹೆಚ್ಚಾಗಿದೆ.

ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗದ ಪ್ರಕಾರ ಚೀನಾದಲ್ಲಿನ ಒಟ್ಟು ಕರೊನಾ ಪ್ರಕರಣಗಳ ಸಂಖ್ಯೆ ಭಾರತ ಸೇರಿದಂತೆ ಇತರ ಕೆಲವು ರಾಷ್ಟ್ರಗಳಿಗಿಂತ ಕಡಿಮೆ ಇದ್ದರೂ ದೈನಂದಿನ ಕರೊನಾ ಪ್ರಕರಣದ ತೀವ್ರ ಹೆಚ್ಚಳ ಅಲ್ಲಿನ ಜನರ ಚಿಂತೆಯನ್ನು ಹೆಚ್ಚಿಸಿದೆ. ಶುಕ್ರವಾರ ಚೀನಾದಲ್ಲಿ ಎರಡು ವರ್ಷಗಳಲ್ಲೇ ಅತ್ಯಧಿಕ ದೈನಂದಿನ ಪ್ರಕರಣ ಕಂಡುಬಂದಾಗ 90 ಲಕ್ಷ ನಿವಾಸಿಗರು ಇರುವ ಚಾಂಗ್​ಚುನ್​ ಕೈಗಾರಿಕಾ ಪ್ರದೇಶದಲ್ಲಿ ಲಾಕ್​ಡೌನ್​ ಹೇರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net