ಈ ದಿನಾಂಕದಂದು ಒಟಿಟಿಗೆ ಬರಲಿದೆ ಆಶಿಕಾ ರಂಗನಾಥ್ ನಟನೆಯ 'ನಾ ಸಾಮಿ ರಂಗ'

Untitled design (58)
Published on

ಬೆಂಗಳೂರು: ಟಾಲಿವುಡ್​ ನಟ ನಾಗಾರ್ಜುನ ಮತ್ತು ಸ್ಯಾಂಡಲ್​ವುಡ್​ನ ಚೆಲುವೆ ನಟಿ ಆಶಿಕಾ ರಂಗನಾಥ್ ಮುಖ್ಯಭೂಮಿಕೆಯಲ್ಲಿ ನಟಿಸಿದ ನಾ ಸಾಮಿ ರಂಗ ಚಿತ್ರಮಂದಿರಗಳಲ್ಲಿ ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡು, ಇದೀಗ ಒಟಿಟಿ ಪ್ರವೇಶಿಸಲು ದಿನಾಂಕ ನಿಗದಿಪಡಿಸಿಕೊಂಡಿದೆ.

ಡ್ಯಾನ್ಸ್​ ಮಾಸ್ಟರ್​ ನಿರ್ದೇಶಕ ವಿಜಯ್ ಬಿನ್ನಿ ನಿರ್ದೇಶನದ ಈ ಚಿತ್ರದ ಮೂಲಕ ಟಾಲಿವುಡ್​ನಲ್ಲಿ ಖಡಕ್ ಆಗಿ ಕಮ್​ಬ್ಯಾಕ್​ ಮಾಡಿದ ನಟ ನಾಗಾರ್ಜುನ, ಗ್ರಾಮೀಣ ಸೊಗಡಿನ ಕಥೆಯನ್ನು ಚಿತ್ರಪ್ರೇಮಿಗಳ ಮುಂದಿಡುವ ಪ್ರಯತ್ನದಲ್ಲಿ ಯಶಸ್ವಿಯಾದರು. ಕನ್ನಡದ ನಟಿ ಆಶಿಕಾ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಮುಖೇನ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಕನ್ನಡ ಅಭಿಮಾನಿಗಳಿಂದ ಮಾತ್ರವಲ್ಲದೇ ತೆಲುಗು ಫ್ಯಾನ್ಸ್​ಗಳಿಂದಲೂ ಹೆಚ್ಚಿನ ಪ್ರಶಂಸೆ ಗಳಿಸಿದರು.

ಇದೀಗ ಚಿತ್ರವು ಒಟಿಟಿ ಪ್ಲಾಟ್​ಫಾರ್ಮ್​ಗೆ ಬರಲು ಸಜ್ಜಾಗಿದ್ದು, ಇದೇ ಫೆಬ್ರವರಿ 17ರಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ವರದಿಗಳು ತಿಳಿಸಿವೆ. ಚಿತ್ರಮಂದಿರಗಳಲ್ಲಿ ನೋಡದ ಪ್ರೇಕ್ಷಕರು ಈಗ ಒಟಿಟಿಯಲ್ಲಿ ಸಿನಿಮಾವನ್ನೇ ನೋಡಬಹುದಾಗಿದೆ.

ಚಿತ್ರದಲ್ಲಿ ನಾಗಾರ್ಜುನ, ಅಲ್ಲರಿ ನರೇಶ್, ಆಶಿಕಾ ರಂಗನಾಥ್, ಮಿರ್ನಾ ಮೆನನ್, ರಾಜ್ ತರುಣ್, ನಾಸರ್, ಶಬೀರ್ ಕಲ್ಲರಕ್ಕಲ್, ರುಕ್ಸಾರ್ ಧಿಲ್ಲೋನ್ ಮುಂತಾದವರ ತಾರಾಗಣವಿದೆ. ಶ್ರೀನಿವಾಸ ಸಿಲ್ವರ್ ಸ್ಕ್ರೀನ್ ಬ್ಯಾನರ್ ಅಡಿಯಲ್ಲಿ ಶ್ರೀನಿವಾಸ ಚಟ್ಟೂರಿ ನಿರ್ಮಿಸಿದ ಚಿತ್ರಕ್ಕೆ ಎಂ.ಎಂ. ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net