More

    ಮುಸುರೆ ತಿಕ್ಕಿ ಪಾತ್ರೆ ತೊಳೆದ ಗವಿಶ್ರೀ

    ಕೊಪ್ಪಳ: ತಮ್ಮ ಸರಳತೆ ಮೂಲಕ ನಾಡಿನ ಮನೆ ಮಾತಾಗಿರುವ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಶನಿವಾರ ಭಕ್ತರೊಂದಿಗೆ ತಾವೇ ಸ್ವತ: ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದರು.

    ಗವಿಮಠ ಜಾತ್ರೆ ಸಾಮಾಜಿಕ ಜಾಗೃತಿಗೆ ಹೆಸರಾಗಿದೆ. ಈ ಬಾರಯೂ ಜ.27ರಿಂದ ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ಜರುಗಿವೆ. ಶುಕ್ರವಾರ (ಫೆ.9) ಅಮಾವಾಸ್ಯೆಯಂದು ಮಹಾದಾಸೋಹ ಮುಕ್ತಾಯವಾಗಿದೆ. 15 ದಿನ ಜರುಗಿದ ಮಹಾದಾಸೋಹದಲ್ಲಿ ಲಾಂತರ ಸ್ವಯಂ ಸೇವಕರು ಭಾಗಿಯಾಗಿ ಸೇವೆ ಸಲ್ಲಿಸಿದ್ದಾರೆ. ಶುಕ್ರವಾರ ರಾತ್ರಿವರೆಗೂ ದಾಸೋಹ ನೆರವೇರಿದೆ. ಶನಿವಾರದಂದು ಮಠದಂಗಳ, ದಾಸೋಹ ಭವನ ಸೇರಿ ಇಡೀ ಆವರಣ ಸ್ವಚ್ಛಗೊಳಿಸಲಾಗಿದೆ.

    ಮಠದ ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರು ಅಡುಗೆ ಪಾತ್ರೆಗಳನ್ನು ಸ್ವಚ್ಛಗೊಳಿಸಿದ್ದಾರೆ. ಈ ವೇಳೆ ಅವರೊಂದಿಗೆ ಕೈ ಜೋಡಿಸಿದ ಗವಿಶ್ರೀಗಳು ತಾವು ಮುಸುರೆ ತಿಕ್ಕಿ ಪಾತ್ರೆ ತೊಳೆದಿದ್ದಾರೆ. ಕಸ ಗೂಡಿಸುವುದು ಸೇರಿ ಇತರ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು. ಇದರಿಂದ ಪ್ರೇರಿತರಾದ ಅನೇಕರು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು. ಸದಾ ಕಾಯಕದಲ್ಲಿ ತೊಡಗಿರುವ ಶ್ರೀಗಳು ಪ್ರತಿ ಬಾರಿ ಜಾತ್ರೋತ್ಸವದಲ್ಲೂ ಸಮಾನ್ಯರಂತೆ ತಾವು ಎಲ್ಲ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ತಮ್ಮ ಸರಳತೆ, ಕಾಯಕ ನಿಷ್ಠೆ, ಭಕ್ತರ ಬಗೆಗಿನ ಕಾಳಜಿಯಿಂದ ನಾಡಿನಾದ್ಯಂತ ಮನೆ ಮಾತಾಗಿದ್ದಾರೆ.

    ಈ ಬಾರಿ 21 ಜೋಡಿ ಅಂಗವಿಕಲರಿಗೆ ಮದುವೆ ಮಾಡುವ ಮೂಲಕ ಸಾಮಾಜಿಕ ಜಾಗೃತಿ ಮೆರೆದಿದ್ದು, 100 ವಿವಿಧ ಸ್ವಯಂ ಉದ್ಯೋಗ ಮಾದರಿಗಳ ಮೂಲಕ ಯುವಕರಲ್ಲಿ ಕಾಯಕ ಅರಿವು ಮೂಡಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts