More

    ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಗೃಹಲಕ್ಷ್ಮೀಯರ ಆರ್ಶೀವಾದ ಯಾರಿಗೆ?: ಜಿಲ್ಲಾದ್ಯಂತ ಎಲ್ಲಿ ಹೋದರೂ ಇದೇ ವಿಷಯವೇ ಚರ್ಚೆ…!

    ಮಂಡ್ಯ: ಸಂಸತ್ ಸಮರದ ಅಖಾಡದಲ್ಲಿ ಅಭ್ಯರ್ಥಿಗಳ ಹಣೆಬರಹ ಏನೆಂದು ಈಗಾಗಲೇ ಮತಯಂತ್ರ ಸೇರಿವೆ. ಆದರೆ ಕ್ಷೇತ್ರದ ಗೃಹಲಕ್ಷ್ಮೀಯರ ಆರ್ಶೀವಾದ ಯಾರಿಗೆ ಸಿಕ್ಕಿದೆ ಎನ್ನುವ ಕುತೂಹಲ ಎಲ್ಲೆಡೆ ಹುಟ್ಟಿಕೊಂಡಿದೆ.
    ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ಅಂತೆಯೇ ಮತದಾನ ಪ್ರಮಾಣದಲ್ಲಿಯೂ ಗೃಹಲಕ್ಷ್ಮೀಯರೇ ಮುಂದಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಸಾಂಪ್ರದಾಯಕ ಮತ ಬಂದಿವೆಯಾದರೂ ಮಹಿಳೆಯರು ಯಾರನ್ನು ಬೆಂಬಲಿಸಿದ್ದಾರೆನ್ನುವ ಯಕ್ಷಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಮಾತ್ರವಲ್ಲದೆ ಮಂಡ್ಯ ಫಲಿತಾಂಶದ ಬಗ್ಗೆ ಯಾರನ್ನೇ ಕೇಳಿದರೂ ಮಹಿಳೆ ಮತದಾರರು ಬೆಂಬಲಿಸಿದವರೇ ಗೆಲ್ಲುತ್ತಾರೆಂದು ಹೇಳುತ್ತಿದ್ದಾರೆ.
    ಕ್ಷೇತ್ರದಲ್ಲಿ 8,76,112 ಪುರುಷ, 9,02,963 ಮಹಿಳೆ, 168 ಇತರೆ ಸೇರಿ 17,79,243 ಮತದಾರರಿದ್ದಾರೆ. ಈ ಪೈಕಿ 7,20,520 ಪುರುಷ, 7,32,503 ಮಹಿಳೆ, 44 ಇತರೆ ಸೇರಿದಂತೆ 14,53,067 ಮತ ಚಲಾವಣೆಯಾಗಿವೆ. ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 1,27,487 ಮಹಿಳೆಯರ ಪೈಕಿ 97,741 ಜನರು ಮತದಾನ ಮಾಡಿದ್ದಾರೆ. ಮದ್ದೂರಿನಲ್ಲಿ 1,11,443 ಮಹಿಳೆಯರ ಪೈಕಿ 91,702, ಮೇಲುಕೋಟೆಯಲ್ಲಿ 1,03,010 ಮಹಿಳೆಯರಲ್ಲಿ 89,189, ಮಂಡ್ಯದಲ್ಲಿ 1,17,759 ಮಹಿಳೆಯರಲ್ಲಿ 89,859, ಶ್ರೀರಂಗಪಟ್ಟಣದಲ್ಲಿ 1,11,431 ಮಹಿಳೆಯರ ಪೈಕಿ 93,336, ನಾಗಮಂಗಲದಲ್ಲಿ 1,08,783 ಮಹಿಳೆಯರಲ್ಲಿ 91,195, ಕೆ.ಆರ್.ಪೇಟೆಯಲ್ಲಿ 1,12,284 ಮಹಿಳೆಯರಲ್ಲಿ 91,112 ಹಾಗೂ ಕೆ.ಆರ್.ನಗರದಲ್ಲಿ 1,10,766 ಮಹಿಳೆಯರ ಪೈಕಿ 88,283 ಮಹಿಳೆಯರು ಹಕ್ಕು ಚಲಾಯಿಸಿದ್ದಾರೆ.

    ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಗೃಹಲಕ್ಷ್ಮೀಯರ ಆರ್ಶೀವಾದ ಯಾರಿಗೆ?: ಜಿಲ್ಲಾದ್ಯಂತ ಎಲ್ಲಿ ಹೋದರೂ ಇದೇ ವಿಷಯವೇ ಚರ್ಚೆ…!

    ಕಾಂಗ್ರೆಸ್‌ಗಿದೆ ಅಚಲ ವಿಶ್ವಾಸ
    ಇನ್ನು ಈ ಚುನಾವಣೆಯಲ್ಲಿ ಕಾಂಗ್ರೆಸ್ ಮಹಿಳೆಯರ ಬೆಂಬಲ ತಮಗೆ ಸಿಕ್ಕಿದೆ ಎನ್ನುವ ಅಚಲ ವಿಶ್ವಾಸದಲ್ಲಿದೆ. ಗೃಹಲಕ್ಷ್ಮೀ, ಶಕ್ತಿ, ಗೃಹಜ್ಯೋತಿ ಯೋಜನೆಯಡಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ. ಇದಲ್ಲದೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಒಂದು ಲಕ್ಷ ರೂ, ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಸೇರಿದಂತೆ ಹಲವು ಯೋಜನೆ ಘೋಷಣೆ ಮಾಡಲಾಗಿದೆ. ಈ ಕಾರಣಕ್ಕೆ ಮಹಿಳೆಯರ ಬಲ ನಮಗೆ ಸಿಕ್ಕಿದೆ ಎನ್ನುವುದು ಕಾಂಗ್ರೆಸ್‌ನ ಲೆಕ್ಕಾಚಾರ.
    ಇದಲ್ಲದೆ ಗ್ಯಾರಂಟಿ ಯೋಜನೆ ಸಂಬಂಧ ಮಹಿಳೆಯರ ಕುರಿತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವಹೇಳನವಾಗಿ ಮಾತನಾಡಿದ್ದಾರೆಂದು ಆರೋಪಿಸಿ ಜಿಲ್ಲಾದ್ಯಂತ ಮಹಿಳಾ ಕಾಂಗ್ರೆಸ್‌ನಿಂದ ಪ್ರತಿಭಟನೆ ಮಾಡಲಾಯಿತು. ಇದು ಕೂಡ ಚುನಾವಣೆಯಲ್ಲಿ ಫ್ಲಸ್ ಆಗಿದೆ ಎನ್ನುವ ಭರವಸೆಯನ್ನು ಕಾಂಗ್ರೆಸ್ ಇಟ್ಟುಕೊಂಡಿದೆ.
    ಈ ನಡುವೆ ಮೈತ್ರಿಯ ಲೆಕ್ಕಾಚಾರವೂ ಬೇರೆಯೇ ಇದೆ. ಸಾರಾಯಿ ನಿಷೇಧ, ಲಾಟರಿ ನಿಷೇಧದಂತಹ ಮಹತ್ವದ ಯೋಜನೆಯನ್ನು ಎಚ್‌ಡಿಕೆ ಜಾರಿಗೊಳಿಸಿದ್ದರು. ಇದರಿಂದ ಎಷ್ಟೋ ಕುಟುಂಬ ಬೀದಿ ಪಾಲಾಗುವುದು ತಪ್ಪಿದೆ. ಇದಲ್ಲದೆ ಒಕ್ಕಲಿಗ, ಲಿಂಗಾಯತ ಸೇರಿದಂತೆ ಹಲವು ಸಮುದಾಯ ಮಹಿಳೆಯರ ಬೆಂಬಲ ಮೈತ್ರಿ ಸಿಕ್ಕಿದೆ. ಅಂತೆಯೇ ಶಕ್ತಿ ಯೋಜನೆಯ ಅಧ್ವಾನದಿಂದ ಬಸ್ ಸಂಚಾರ ದುಸ್ತರವಾಗಿರುವುದು, ಮನೆಗೆ ಎರಡು ಸಾವಿರ ರೂ ಕೊಟ್ಟು ಮತ್ತೊಂದೆಡೆ ಆರ್‌ಟಿಸಿ, ಛಾಪಾ ಕಾಗದ ಸೇರಿದಂತೆ ಕೆಲ ಅಗತ್ಯ ದಾಖಲೆಗಳ ಬೆಲೆ ಏರಿಕೆ ಮಾಡಿ ವಸೂಲಿ ಮಾಡಲಾಗುತ್ತಿದೆ ಎನ್ನುವ ಟೀಕೆಗಳು ಇವೆ. ಆದ್ದರಿಂದ ಮಹಿಳೆಯರು ಮೈತ್ರಿಯನ್ನು ಬೆಂಬಲಿಸಿದ್ದಾರೆನ್ನುವ ವಿಶ್ವಾಸವನ್ನು ಹೊಂದಲಾಗಿದೆ.

    ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಗೃಹಲಕ್ಷ್ಮೀಯರ ಆರ್ಶೀವಾದ ಯಾರಿಗೆ?: ಜಿಲ್ಲಾದ್ಯಂತ ಎಲ್ಲಿ ಹೋದರೂ ಇದೇ ವಿಷಯವೇ ಚರ್ಚೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts