More

    ಮಕ್ಕಳಲ್ಲಿ ಸಂಸ್ಕೃತಿ, ನೈತಿಕ ಮೌಲ್ಯಬೆಳೆಯಲಿ

    ಉಪ್ಪಿನಬೆಟಗೇರಿ: ಶಾರದಾದೇವಿಯವರು ಮಕ್ಕಳಿಗೆ ವಾತ್ಸಲ್ಯ ನೀಡುವುದರೊಂದಿಗೆ ತ್ಯಾಗಮಯಿ ಗುರುವಾಗಿ ಆಧ್ಯಾತ್ಮಿಕ ಸಾಧನೆ ಮಾಡಲು ಮಾರ್ಗದರ್ಶಕರಾಗಿದ್ದರು ಎಂದು ಮಾತೋಶ್ರೀ ತೇಜೋಮಯಿ ಮಾತಾಜಿ ಹೇಳಿದರು.

    ಸಮೀಪದ ತಡಕೋಡ ಶ್ರೀ ಶಾರದಾಮಾತಾ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಾರದಾಮಾತಾ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು. ಶ್ರೀ ಶಾರದಾದೇವಿಯವರ ಜೀವನ, ಆದರ್ಶಗಳು ತಾಯಂದಿರಿಗೆ ಮಾದರಿಯಾಗಿವೆ. ತಾಯಿಯಂದಿರು ತಮ್ಮ ಮಕ್ಕಳ ಲಾಲನೆ, ಪಾಲನೆ ಹಾಗೂ ಪೋಷಣೆ ಮಾಡುವುದರೊಂದಿಗೆ ಅವರಲ್ಲಿ ನೈತಿಕ ಹಾಗೂ ಸಂಸ್ಕೃತಿಯ ಮೌಲ್ಯಗಳನ್ನು ಬೆಳೆಸಬೇಕು ಎಂದರು.

    ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಮಾಜಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಮಾತನಾಡಿ, ಈಗಿನ ಪಾಲಕರು ಮಕ್ಕಳ ಶಿಕ್ಷಣಕ್ಕೆ ಮಾತ್ರ ಪ್ರಾಧಾನ್ಯತೆ ನೀಡುತ್ತಿರುವುದರಿಂದ ಅವರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವಕರು ಗುಟ್ಖಾ, ತಂಬಾಕು ಸೇವನೆಯಂತಹ ದುಶ್ಚಟಗಳ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ಕೆಟ್ಟ ಅಭ್ಯಾಸಗಳನ್ನು ಬಿಟ್ಟು ಶಾರೀರಿಕ ಹಾಗೂ ಮಾನಸಿಕವಾಗಿ ಸದೃಢರಾಗಿ ಉತ್ತಮ ಜೀವನ ನಡೆಸಬೇಕು ಎಂದರು.

    ಕಲ್ಲೂರ ಆರೂಢ ಆಶ್ರಮದ ಮಾತೋಶ್ರೀ ಲಲಿತಮ್ಮತಾಯಿ, ಎಪಿಎಂಸಿ ಮಾಜಿ ಸದಸ್ಯೆ ಪಾರ್ವತಿ ದಂಡಿನ, ವಿಜಯಲಕ್ಷ್ಮೀ ಜೋಶಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು 128 ತಾಯಂದಿರ ಪಾದ ಪೂಜೆ ಮಾಡಿದರು. ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಮಾತೆಯರಾದ ನೇತ್ರಾ ತಿರಕಪ್ಪ ವಡ್ಡರ, ಲಕ್ಷ್ಮೀ ಹಲಗಿ, ಮಂಜುಳಾ ಗುರಣ್ಣವರ ಹಾಗೂ ರೇಶ್ಮಾ ಗುರಣ್ಣವರ ಅವರನ್ನು ಸನ್ಮಾನಿಸಲಾಯಿತು. ರಾಜೇಶ್ವರಿ ಮಾತಾಜಿ, ಲಕ್ಷ್ಮೀ ಮಾತಾಜಿ ಹಾಗೂ ಸೌಮ್ಯಾ ಮಾತಾಜಿ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts