More

    ಸಂಪತ್ತನ್ನು ಸತ್ಕಾರ್ಯಕ್ಕೆ ಉಪಯೋಗಿಸುವುದೇ ತುಲಾಭಾರ, ಸಚಿವ ಜೋಶಿ ಅಭಿಪ್ರಾಯ

    ಉಪ್ಪಿನಬೆಟಗೇರಿ: ಮನುಷ್ಯ ಗಳಿಸಿದ ಸಂಪತ್ತನ್ನು ಸತ್ಕಾರ್ಯಕ್ಕೆ ಉಪಯೋಗ ಮಾಡು ಎನ್ನುವ ಸಂದೇಶವೇ ತುಲಾಭಾರ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

    ಉಪ್ಪಿನಬೆಟಗೇರಿ ಗ್ರಾಮದ ವಿರೂಪಾಕ್ಷೇಶ್ವರ ಜಾತ್ರೆ ಅಂಗವಾಗಿ ದೇವಸ್ಥಾನದ ಆವರಣದ ವೇದಿಕೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರವಚನ ಮಂಗಲ, ಗುರುವಂದನೆ, ತುಲಾಭಾರ ಮತ್ತು ಲವಣಗಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಒಂದು ಸಾವಿರ ಪೂರ್ಣಚಂದ್ರ ಕಂಡ ಲೌಕಿಕರಿಗೆ ಹಾಗೂ ಸ್ವಾಮೀಜಿಗಳಿಗೆ ವಿಶೇಷವಾಗಿ ತುಲಾಭಾರ ಮಾಡಲಾಗುತ್ತದೆ. ಜಗತ್ತು ಬದಲಾಗುತ್ತಿದ್ದು, ಪಾಶ್ಚಾತ್ಯ ಜನರು ಭಾರತೀಯ ಸಂಸ್ಕೃತಿ, ಪದ್ಧತಿ ತಿಳಿಯಲು ಬರುತ್ತಿದ್ದಾರೆ ಎಂದರು.

    ಪ್ರತಿ ವರ್ಷ ಜಾತ್ರೆ ಅಂಗವಾಗಿ ಕೊಡಮಾಡುವ ಪ್ರಸಕ್ತ ವರ್ಷದ ಲವಣಗಿರಿ ಪ್ರಶಸ್ತಿಯನ್ನು ಹಿರಿಯ ನ್ಯಾಯವಾದಿ ಅಂದಾನಪ್ಪ ಚಾಕಲಬ್ಬಿಅವರಿಗೆ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚಾಕಲಬ್ಬಿ ಅವರು, ಪ್ರೀತಿ, ವಾತ್ಸಲ್ಯದಿಂದ ಪ್ರಶಸ್ತಿ ಪ್ರದಾನ ಮಾಡಿರುವ ಶ್ರೀಗಳು ನನಗೆ ಹೆಚ್ಚಿನ ಜವಾಬ್ದಾರಿ ವಹಿಸಿದ್ದಾರೆ ಎಂದರು.

    ತುಲಾಭಾರ: ಈ ವೇಳೆ ಜಮಖಂಡಿ ಓಲಿಮಠದ ಡಾ. ಚನ್ನಬಸವ ಸ್ವಾಮೀಜಿ, ಮುನವಳ್ಳಿ ಸೋಮಶೇಖರ ಮಠದ ಮುರಘೕಂದ್ರ ಸ್ವಾಮೀಜಿ, ಅಮೀನಗಡ ಪ್ರಭುಶಂಕರೇಶ್ವರ ಮಠದ ಶಂಕ್ರರಾಜೇಂದ್ರ ಸ್ವಾಮೀಜಿ, ಕಮತಗಿ ಹುಚ್ಚೇಶ್ವರ ಸಂಸ್ಥಾನಮಠದ ಹುಚ್ಚೇಂದ್ರ ಸ್ವಾಮೀಜಿ, ಖೇಡಗಿ ವಿರಕ್ತಮಠದ ಶಿವಬಸವ ಸ್ವಾಮೀಜಿಗಳಿಗೆ ಭಕ್ತರು ತುಲಾಭಾರ ನೆರವೇರಿಸಿದರು. ಸ್ಥಳೀಯ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಆಶೀರ್ವಚನ ನೀಡಿದರು. ಗುರುರಾಜ ಹುಣಸಿಮರದ, ಬಸವರೆಡ್ಡಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಂಕರ ಬಸವರೆಡ್ಡಿ, ಮಾಜಿ ಶಾಸಕಿ ಸೀಮಾ ಮಸೂತಿ, ಸವಿತಾ ಅಮರಶೆಟ್ಟಿ, ಹೊಳೆಬಸನಗೌಡ ದೇಸಾಯಿ, ಚಂದ್ರಶೇಖರ ಜುಟ್ಟಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts