ಉಪ್ಪಿನಬೆಟಗೇರಿ: ಲೋಕಸಭಾ ಚುನಾವಣೆ ಅಂಗವಾಗಿ ಉಪ್ಪಿನಬೆಟಗೇರಿ ಗ್ರಾಮದ ಹೊರವಲಯದ ಬೈಲಹೊಂಗಲ ರಸ್ತೆಯಲ್ಲಿ ಹಾಕಿದ್ದ ಚೆಕ್ ಪೋಸ್ಟ್ ಗುರುವಾರ ಸಂಜೆ ಬೀಸಿದ ರಭಸದ ಗಾಳಿಗೆ ಬುಡಮೇಲಾಗಿದೆ.
ಗುರುವಾರ ಸಂಜೆ ಏಕಾ ಏಕಿಯಾಗಿ ಗುಡುಗು ಸಹಿತ ರಭಸದ ಗಾಳಿ ಬೀಸಿದ್ದರಿಂದ ತಗಡಿನ ಶೆಡ್ ಕಿತ್ತು ಬಿದ್ದಿದೆ. ಶೆಡ್ ಒಳಗೆ ಅಳವಡಿಸಿದ್ದ ಸಿಸಿ ಕ್ಯಾಮರಾ ಸೇರಿ ಕೆಲ ವಸ್ತುಗಳು ಹಾಳಾಗಿವೆ. ಗಾಳಿಗೆ ಶೆಡ್ ಮೇಲೆಳುವುದನ್ನು ಕಂಡ ಚುನಾವಣಾ ಸಿಬ್ಬಂದಿ ಹೊರಗಡೆ ಓಡಿ ಹೋಗಿದ್ದಾರೆ.