7ರಂದು ಅಂಬೇಡ್ಕರ್ ಭವನದಲ್ಲಿ ಮಲೆನಾಡು ಮುದ್ರಕರ ಹಬ್ಬ

Madhavachar
ಮಲೆನಾಡು ಮುದ್ರಕರ ಸಂಘದ ಅಧ್ಯಕ್ಷ ಎಂ. ಮಾಧವಚಾರ್
Published on

ಶಿವಮೊಗ್ಗ: ಮಲೆನಾಡು ಮುದ್ರಕರ ಸಂಘದಿಂದ ಮುದ್ರಕರ ಹಬ್ಬ ಜ.7ರಂದು ಬೆಳಗ್ಗೆ 9.30ಕ್ಕೆ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಂ.ಮಾಧವಾಚಾರ್ ತಿಳಿಸಿದರು.

ಮುದ್ರಕರ ಹಬ್ಬವನ್ನು ನಾಗರಿಕ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್, ಪುರುಷರ ಕ್ರೀಡಾಕೂಟವನ್ನು ಸಮುದಾಯ ಬಳಗದ ಕೆ.ಜಿ.ವೆಂಕಟೇಶ್ ಹಾಗೂ ಮಹಿಳೆಯರ ಕ್ರೀಡಾಕೂಟವನ್ನು ಫ್ಲಾರೆನ್ಸ್ ನೈಟಿಂಗಲ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ನಾಗರತ್ನಾ ಶಂಕರ್ ಉದ್ಘಾಟಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕ್ರೀಡೆಗಳು, ಕ್ವಿಜ್, ಮುದ್ರಣ ಸಂಬಂಧಿ ವಿವಿಧ ಸ್ಪರ್ಧೆ ಆಯೋಜಿಸಿದ್ದು ಸ್ಥಳದಲ್ಲೇ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಬೆಂಗಳೂರಿನ ಜೂನಿಯರ್ ಪುನೀತ್ ರಾಜ್‌ಕುಮಾರ್ ಅವರಿಂದ ಪ್ರದರ್ಶನ ಇತ್ಯಾದಿ ಮನರಂಜನೆ ಕಾರ್ಯಕ್ರಮ ನಡೆಯಲಿವೆ ಎಂದರು.
ಕಾರ್ಯದರ್ಶಿ ಗಣೇಶ್ ಬಿಳಗಿ ಮಾತನಾಡಿ, ಸಂಜೆ 5ಕ್ಕೆ ಬೆಂಗಳೂರಿನ ಸವಿಗಾನ ತಂಡದಿಂದ ಮೆಲ್ಲುಸಿರೇ ಸವಿಗಾನ ವಿಶೇಷ ಹಳೆಯ ಕನ್ನಡ ಚಿತ್ರಗೀತೆಗಳ ಗಾಯನ ಇರುತ್ತದೆ. ಪ್ರತಿ ಗಂಟೆಗೊಮ್ಮೆ ಹಾಜರಿರುವ ಸಭಿಕರಲ್ಲಿ ಅದೃಷ್ಟವಂತರನ್ನು ಡ್ರಾ ಮೂಲಕ ಆಯ್ಕೆ ಮಾಡಿ ಬೆಳ್ಳಿ ನಾಣ್ಯವನ್ನು ಬಹುಮಾನವಾಗಿ ನೀಡಲಾಗುವುದು ಎಂದರು.
ಸಂಜೆ 6.30ಕ್ಕೆ ಸಮಾರೋಪ ಸಮಾರಂಭವಿದ್ದು, ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್. ಸುಂದರ್‌ರಾಜ್ ಹಾಗೂ ಹಿರಿಯ ಪತ್ರಕರ್ತ ಎಸ್.ಚಂದ್ರಕಾಂತ್ ಅಭಿನಂದನಾ ಕಾರ್ಯಕ್ರಮ ನಡೆಸಿಕೊಡುವರು. ಸಂಘದ ರಾಜ್ಯ ವಲಯ ಸಂಚಾಲಕ ಕೆ.ಆರ್.ಚಂದ್ರಪ್ಪ, ಹಾಸನ ಮುದ್ರಕ ಸಂಘದ ಕಿರಣ್ ಗೌಡ ಕಿರಗಡಲು, ಬೆಂಗಳೂರಿನ ಸ್ಮಿತ್ ಗ್ರಾಫಿಕ್ಸ್ ಲಿಂಕ್‌ನ ಬಿ.ವಿ.ಮೋಹನ್ ಉಪಸ್ಥಿತರಿರುವರು ಎಂದರು.
ಪದಾಧಿಕಾರಿಗಳಾದ ಬಿ.ಇ.ರವಿ, ಎಚ್.ಎಂ.ಮಂಜುನಾಥ್, ಕೆ.ಟಿ.ಮೋಹನ್, ಎನ್.ಎಸ್.ರಮೇಶ್, ಎನ್.ಜಿ.ಯೋಗೀಶ್, ಎಸ್.ಎಸ್.ಗಿರೀಶ್‌ಕುಮಾರ್, ಎಚ್.ಸಿ.ಮುರುಳಿ ಕೃಷ್ಣ, ಬಿ.ಆರ್.ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net