ಜೂ.29ರಂದು ಸ್ವರ ಫೌಂಡೇಷನ್​ 'ಸಂಗೀತೋತ್ಸವ'; ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜನೆ

Music
Published on

ಬೆಂಗಳೂರು: ಸ್ವರ ಫೌಂಡೇಷನ್​ ವತಿಯಿಂದ ಶನಿವಾರ (ಜೂ. 29) ಜೆ.ಸಿ. ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ 'ಸಂಗೀತೋತ್ಸವ' ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ 3.30ಕ್ಕೆ ರಾಜ್ಯಪಾಲ ಥಾವರ್​ಚಂದ್​ ಗೆಹಲೋತ್​ ಚಾಲನೆ ನೀಡಲಿದ್ದಾರೆ.

ಹೆಸರಾಂತ ಸಂಗೀತಗಾರರಾದ ಭಾರತಿದೇವಿ ರಾಜಗುರು, ಹಿಂದುಸ್ತಾನಿ ಗಾಯಕರಾದ ಪಂಡಿತ್​ ವಿನಾಯಕ ತೊರವಿ ಮತ್ತು ಪಂಡಿತ್​ ಎಂ. ವೆಂಕಟೇಶ್​ಕುಮಾರ್​ ಅವರನ್ನು ಸನ್ಮಾನಿಸಲಾಗುವುದು. ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ, ಹೈಕೋರ್ಟ್​ ನ್ಯಾಯಮೂರ್ತಿ ಕೃಷ್ಣ ಎಸ್​. ದೀತ್​, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ, ನಿವೃತ್ತ ಐಎಎಸ್​ ಅಧಿಕಾರಿ ಚಿರಂಜೀವಿ ಸಿಂಗ್​, ಕನ್ನಡ ಮತ್ತು ಸಂಸತಿ ಇಲಾಖೆ ಜಂಟಿ ಕಾರ್ಯದರ್ಶಿ ಬಲವಂತರಾವ್​ ಪಾಟೀಲ್​ ಪಾಲ್ಗೊಳ್ಳಲಿದ್ದಾರೆ.

ಇದೇ ವೇಳೆ ಪಂಡಿತ್​ ಶೈಲೇಶ ಭಾಗವತ್​ (ಶಹನಾಯ್​) ಹಾಗೂ ಉಸ್ತಾದ್​ ರಫೀಕ್​ ಖಾನ್​ (ಸಿತಾರ್​) ಜುಗಲ್​ಬಂದಿ ಪ್ರಸ್ತುತಪಡಿಸಲಿದ್ದಾರೆ. ಭರತನಾಟ್ಯ ಕಲಾವಿದೆ ವಿದುಷಿ ಮಾಳವಿಕಾ ನಾಯರ್​, ಹಿಂದುಸ್ತಾನಿ ಗಾಯಕ ಡಾ. ಮುದ್ದು ಮೋಹನ್​ ಅವರಿಂದ ಗಾಯನ ನಡೆಯಲಿದೆ. ಪಂಡಿತ್​ ವೆಂಕಟೇಶ್​ಕುಮಾರ್​ ಸಂಗೀತ ಕಛೇರಿಯೂ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net