ಜು.26ರಂದು ಕಾಸರಗೋಡಿನಲ್ಲಿ ಆರ್‌ವಿಆರ್ ಹೆಲ್ತ್ ಕೇರ್ ಉಪ ಶಾಖೆ ಶುಭಾರಂಭ

ಆರ್‌ವಿ ಆರ್ ಹೆಲ್ತ್ ಕೇರ್ ನ್ಯೂರೋ ಆಂಕಾಲಜಿ ಸೆಂಟರ್ ಕಾಸರಗೋಡಿನಲ್ಲಿ ಜು.26ರಂದು ಆರಂಭಗೊಳ್ಳಲಿದೆ ಎಂದು ಆರ್‌ವಿಆರ್ ಸೂಪ್ಟರ್ ಸ್ಪೆಶಾಲಿಟಿ ಸೆಂಟರ್‌ನ ನಿರ್ದೇಶಕ ಡಾ.ರಾಘವೇಂದ್ರ ಬಿ.ಎಸ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಆರ್‌ವಿ ಆರ್ ಹೆಲ್ತ್ ಕೇರ್ ನ್ಯೂರೋ ಆಂಕಾಲಜಿ ಸೆಂಟರ್ ಕಾಸರಗೋಡಿನಲ್ಲಿ ಜು.26ರಂದು ಆರಂಭಗೊಳ್ಳಲಿದೆ ಎಂದು ಆರ್‌ವಿಆರ್ ಸೂಪ್ಟರ್ ಸ್ಪೆಶಾಲಿಟಿ ಸೆಂಟರ್‌ನ ನಿರ್ದೇಶಕ ಡಾ.ರಾಘವೇಂದ್ರ ಬಿ.ಎಸ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
Published on
ಮಂಗಳೂರು: ಆರ್‌ವಿಆರ್ ಹೆಲ್ತ್ ಕೇರ್ ಇದರ ಉಪ ಶಾಖೆ ಆರ್‌ವಿ ಆರ್ ಹೆಲ್ತ್ ಕೇರ್ ನ್ಯೂರೋ ಆಂಕಾಲಜಿ ಸೆಂಟರ್ ಕಾಸರಗೋಡಿನಲ್ಲಿ ಜು.26ರಂದು ಆರಂಭಗೊಳ್ಳಲಿದೆ ಎಂದು ಆರ್‌ವಿಆರ್ ಸೂಪ್ಟರ್ ಸ್ಪೆಶಾಲಿಟಿ ಸೆಂಟರ್‌ನ ನಿರ್ದೇಶಕ ಡಾ.ರಾಘವೇಂದ್ರ ಬಿ.ಎಸ್ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಆರ್‌ವಿಆರ್ ಹೆಲ್ತ್ ಕೇರ್‌ನಲ್ಲಿ ಎಲ್ಲ ರೋಗಿಗಳಿಗೆ ಎಲ್ಲ ರೀತಿಯ ವೈದ್ಯಕೀಯ ಸೇವೆಗಳನ್ನು ನೀಡಲಾಗುತ್ತಿದೆ. ಈಗಾಗಲೇ ಮಂಗಳೂರಿನ ಳ್ನೀರ್‌ನಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ರೋಗಿಗಳಿಗೆ ಸೇವೆ ನೀಡುತ್ತಾ ಬಂದಿದೆ. ವಿಶೇಷವಾಗಿ ನ್ಯೂರೋ, ಅರ್ಬುಧ ರೋಗ ಸಂಬಂಧಿತ ಚಿಕಿತ್ಸೆ ಸೇರಿದಂತೆ ಪ್ರಮುಖ ಕಾಯಿಲೆಗಳಿಗೆ ಒಂದೇ ಸೂರಿನಡಿಯಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡಲಾಗುತ್ತದೆ. ವಿಶೇಷವಾಗಿ ಕಾಸರಗೋಡಿನ ಬಳಿಕ ಚಿಕ್ಕಮಗಳೂರಿನಲ್ಲೂ ಆರ್‌ವಿಆರ್ ಹೆಲ್ತ್ ಕೇರ್ ಉಪಶಾಖೆ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ. ಇದರ ಜತೆಗೆ ಶಿವಮೊಗ್ಗ, ಬೆಂಗಳೂರಿನಲ್ಲೂ ಆರಂಭವಾಗಲಿದೆ. ಮಂಡ್ಯ ಭಾಗದಲ್ಲಿ ಆರ್‌ವಿಆರ್‌ನಿಂದ ಉಚಿತ ಧರ್ಮ ಆಸ್ಪತ್ರೆ ಆರಂಭಿಸುವ ಚಿಂತನೆ, ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದರು.
ಆರೋಗ್ಯ ಬೈ ಆರ್‌ವಿಆರ್ ಮೂಲಕ ಹಿಂದುಳಿದ ವರ್ಗಗಳಿಗೆ ತಲುಪುವ ದೃಷ್ಟಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಸಲಹಾ ಕಾರ‌್ಯಕ್ರಮಗಳನ್ನು ಕೂಡ ಆರಂಭಿಸಲಾಗಿದ್ದು, ಇದರಲ್ಲಿ ತಜ್ಞ ವೈದ್ಯರ ಸಲಹೆಗಳು, ಸಮಗ್ರ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಜಾಗೃತಿಗಳನ್ನು ಸ್ಥಳೀಯ ಸಮುದಾಯಗಳಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ಚಿಕ್ಕಮಗಳೂರಿನಲ್ಲಿ ಈ ಕಾರ‌್ಯಕ್ರಮವನ್ನು ಹಮ್ಮಿಕೊಂಡಿದ್ದು, ಉತ್ತಮ ಸ್ಪಂಧನೆ ದೊರಕಿದ ಬೆನ್ನಲ್ಲೇ ಕರ್ನಾಟಕ, ಕೇರಳ ಸೇರಿದಂತೆ ರಾಜ್ಯದ ಇತರ ಭಾಗಗಳಿಗೂ ವಿಸ್ತರಣೆ ಮಾಡಲು ಚಿಂತನೆ ಮಾಡಲಾಗುತ್ತಿದೆ ಎಂದರು.
ಆರ್‌ವಿಆರ್‌ನ ಅಧ್ಯಕ್ಷ ವಿಜಯ್ ಎಂ.ಎನ್. ಶೆಟ್ಟಿ, ಆರ್‌ವಿಆರ್‌ನ ಪ್ರಮುಖ ತಜ್ಞರಾದ ಡಾ.ಅಂಜನ್ ಕುಮಾರ್, ಡಾ.ವಿಘ್ನೇಶ್, ಅಡಾ. ಅಬೂ ಹಾಗೂ ಸಿಇಇ ಅನಂತ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net