ನಡು ರಸ್ತೆಯಲ್ಲೇ ಮಹಿಳೆಯ ಸೀರೆ ಎಳೆದ ದುರುಳರು: ನಾಮಪತ್ರ ಸಲ್ಲಿಸುವಾಗ ನಡೆದ ದುಷ್ಕೃತ್ಯ

Woman '
Published on

ನವದೆಹಲಿ: ವ್ಯಕ್ತಿಗಳಿಬ್ಬರು ಮಹಿಳೆಯೊಬ್ಬಳ ಮೇಲೆ ಕೈ ಮಾಡಿ ಆಕೆಯ ಸೀರೆಯನ್ನು ಎಳೆದಿರುವ ಮನಕದಡುವ ವಿಡಿಯೋ ಉತ್ತರ ಪ್ರದೇಶದಲ್ಲಿಂದು ಬೆಳಕಿಗೆ ಬಂದಿದೆ. ಸ್ಥಳೀಯ ಚುನಾವಣೆಯ ನಾಮಪತ್ರ ಸಲ್ಲಿಕೆ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಮಹಿಳೆಯ ಮೇಲೆ ದಾಳಿ ನಡೆಸಿದವರು ಅಖಿಲೇಶ್​ ಯಾದವ್​ ಅವರ ಸಮಾಜವಾದಿ ಪಾರ್ಟಿಯ ಬೆಂಬಲಿಗರೆಂದು ಹೇಳಲಾಗಿದೆ. ಬ್ಲಾಕ್​ ಪಂಚಾಯಿತಿ ಚುನಾವಣೆಗೆ ಅಭ್ಯರ್ಥಿಯೊಬ್ಬರ ಜತೆಗೆ ಆಕೆಯು ಸಹ ನಾಮಪತ್ರ ಸಲ್ಲಿಸಲು ಬಂದಿದ್ದಳು ಎಂದು ವರದಿಯಾಗಿದೆ.

ಈ ಘಟನೆ ಉತ್ತರ ಪ್ರದೇಶ ರಾಜಧಾನಿ ಲಖನೌದಿಂದ 130 ಕಿ.ಮೀ ದೂರದಲ್ಲಿರುವ ಲಖಿಂಪುರ್​ ಖೇರಿಯಲ್ಲಿ ನಡೆದಿದೆ. ಇಂದು ಉತ್ತರ ಪ್ರದೇಶದ ಅನೇಕ ಪ್ರದೇಶಗಲ್ಲಿ ಒಂದು ಡಜನ್​ಗೂ ಅಧಿಕ ಗಲಾಟೆಗಳು ನಡೆದಿವೆ ಎಂದು ಪೊಲೀಸ್​ ಅಧಿಕಾರಿ ಪ್ರಶಾಂತ್​ ಕುಮಾರ್​ ಎಂಬುವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

825 ಬ್ಲಾಕ್ ಪ್ರಮುಖ್ ಅಥವಾ ಸ್ಥಳೀಯ ಪಂಚಾಯತ್ ಮುಖಂಡರಿಗೆ ಶನಿವಾರ ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸಲು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಆದರೆ 14 ಪ್ರದೇಶಗಳಿಂದ ಹಿಂಸಾಚಾರ ವರದಿಯಾಗಿದೆ ಎಂದು ಪ್ರಶಾಂತ್​ ಕುಮಾರ್ ಹೇಳಿದರು.

ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬಹುತೇಕ ಸ್ಥಾನಗಳಲ್ಲಿ ಭರ್ಜರಿ ಗೆಲುವು ದಾಖಲಿಸಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net