VIDEO| ಶಾಲಾ ಕಾಂಪೌಂಡ್​ ಏರಿ ಯುವಕರಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನಕಲು ಚೀಟಿ: ವಿಡಿಯೋ ವೈರಲ್​!

Youth
Published on

ಯವತ್ಮಾಲ್​(ಮಹಾರಾಷ್ಟ್ರ): ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ ಯುವಕರ ಗುಂಪೊಂದು ಶಾಲೆಯ ಕಾಂಪೌಂಡ್​ ಏರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ನಕಲು ಚೀಟಿಯನ್ನು ನೀಡುತ್ತಿರುವ ದೃಶ್ಯ ಸೆರೆಯಾಗಿದೆ.

ಮಹಾರಾಷ್ಟ್ರ ಯವತ್ಮಾಲ್​ ಜಿಲ್ಲೆಯ ಮಹಾಗಾಂವ್​ ಪಟ್ಟಣದ ಶಾಲೆಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಈ ಬಗ್ಗೆ ಮಾತನಾಡಿರುವ ಪರೀಕ್ಷಾ ಕೇಂದ್ರ ನಿಯಂತ್ರಕ ಎ.ಎಸ್​. ಚೌಧರಿ, ಪೂರ್ಣಗೊಳ್ಳದ ಕಾಂಪೌಂಡ್​ ಗೋಡೆಯಿಂದ ನಾವು ಈ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ ಎಂದು ಅಸಹಾಯಕತೆ ಹೊರಹಾಕಿದರು.

ಮುಂದುವರಿದು ಪರೀಕ್ಷಾ ಕೇಂದ್ರದಲ್ಲಿ ಪೊಲೀಸ್​ ಭದ್ರತೆಯನ್ನು ಹೆಚ್ಚಿಸಲು ಕೋರಿದ್ದೇವೆ. ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದರು. ಅಲ್ಲದೆ, ಶಾಲೆಯು ನ್ಯಾಯೋಚಿತ ಪರೀಕ್ಷೆಯನ್ನು ನಡೆಸಲು ಬದ್ಧವಾಗಿದೆ ಎಂದು ಚೌಧರಿ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net