ಸೂಜಿ ಇಲ್ಲದೆ ನೀಡಬಹುದಾದ mRNA ಆಧಾರಿತ ಕೋವಿಡ್‌ ಬೂಸ್ಟರ್ ಇಂಜೆಕ್ಷನ್​ ಕೇಂದ್ರದಿಂದ ಬಿಡುಗಡೆ

needle free injection
ಸಾಂದರ್ಭಿಕ ಚಿತ್ರ
Published on

ದೆಹಲಿ: ಓಮಿಕ್ರಾನ್ ವಿರುದ್ಧ ನಿರ್ದಿಷ್ಟ mRNA ಆಧಾರಿತ ಕೋವಿಡ್‌ ಬೂಸ್ಟರ್ ಲಸಿಕೆಯನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಬಿಡುಗಡೆ ಮಾಡಿದ್ದಾರೆ.

ಸ್ಥಳೀಯ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಿದ ಭಾರತದ ಮೊದಲ mRNA ಲಸಿಕೆಯಾಗಿದ್ದು, ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ (BIRAC) ಹಾಗೂ GEMCOVAC-OM ಜೈವಿಕ ತಂತ್ರಜ್ಞಾನ ಇಲಾಖೆಯಿಂದ(DBT) ಜಾರಿಗೊಳಿಸಲಾದ ಮಿಷನ್ COVID ಸುರಕ್ಷಾ ಬೆಂಬಲದೊಂದಿಗೆ ಜೆನೋವಾ ಇದನ್ನು ಅಭಿವೃದ್ಧಿಪಡಿಸಿದೆ.

ಇದನ್ನೂ ಓದಿ: ಪ್ರತಿಷ್ಠಿತ ಶಾಲೆಯಲ್ಲಿ ಸೀಟ್​ ಪಡೆಯಲು PMO ಅಧಿಕಾರಿಯಂತೆ ಪೋಸ್​ ನೀಡಿದ ವ್ಯಕ್ತಿ

ಇದರ ವಿಶಿಷ್ಟ ವೈಶಿಷ್ಟ್ಯವೆಂದರೆ ಈ ಲಸಿಕೆಯನ್ನು ಸೂಜಿ ಇಲ್ಲದೆ ನೀಡಬಹುದಾಗಿದ್ದು, ಈ ಲಸಿಕೆಯ ತುರ್ತು ಬಳಕೆಯ ಅಧಿಕಾರಕ್ಕಾಗಿ ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಕಚೇರಿಯಿಂದ ಕೆಲವು ದಿನಗಳ ಹಿಂದೆ ಅನುಮೋದನೆಯನ್ನು ಪಡೆಯಲಾಗಿತ್ತು. ಸೂಜಿ-ಮುಕ್ತ ಇಂಜೆಕ್ಷನ್ ಸಾಧನದಿಂದ ಒಳ-ಚರ್ಮಕ್ಕೆ ನೇರವಾಗಿ ಲಸಿಕೆಯನ್ನು ನೀಡಲಾಗುತ್ತದೆ.

ಕಡಿಮೆ ಸಮಯದಲ್ಲಿ ಇತರ ಲಸಿಕೆಗಳನ್ನು ತಯಾರಿಸಲು ಈ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದಾಗಿದ್ದು, GEMCOVAC-OMವೊಂದು ಥರ್ಮೋಸ್ಟೆಬಲ್ ಲಸಿಕೆಯಾಗಿದೆ. ಇತರ ಅನುಮೋದಿತ mRNA-ಆಧಾರಿತ ಲಸಿಕೆಗಳಿಗೆ ಬಳಸಲಾಗುವ ಅಲ್ಟ್ರಾ-ಕೋಲ್ಡ್ ಚೈನ್ ಮೂಲಸೌಕರ್ಯವು ಈ ಲಸಿಕೆಗೆ ಅಗತ್ಯವಿಲ್ಲ ಎಂದು ಹೇಳಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net