ಬಾಕ್ಸ್ ಆಫೀಸ್​ನಲ್ಲಿ ಕಮಾಲ್​ ಮಾಡಿದ 'ಓ ಮೈ ಗಾಡ್ 2'; ಅಕ್ಷಯ್​ ಕುಮಾರ್ ನಟನೆಯ ಚಿತ್ರ ಗಳಿಸಿದ್ದೆಷ್ಟು?

Untitled design (9)
Published on

ಮುಂಬೈ: ಬಾಲಿವುಡ್​​ನ ಖ್ಯಾತ ನಟ ಅಕ್ಷಯ್​ ಕುಮಾರ್​ ನಟನೆಯ 'ಓ ಮೈ ಗಾಡ್ 2' (OMG 2), ಇದೀಗ ಬ್ಲಾಕ್​ಬಸ್ಟರ್​ ಚಿತ್ರವಾಗಿ ಹೊರಹೊಮ್ಮಿದ್ದು, ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿಸಿದಂತೆ ಉತ್ತಮ ಗಳಿಕೆಯನ್ನು ಕಂಡಿದೆ.

ಅಮಿತ್ ರೈ ನಿರ್ದೇಶನದ 'ಓ ಮೈ ಗಾಡ್​ 2' ಚಿತ್ರವು ಇದೀಗ ಬಾಕ್ಸ್​ ಆಫೀಸ್​ನಲ್ಲಿ 100 ಕೋಟಿ ರೂ. ಕಲೆಕ್ಷನ್​ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಚಿತ್ರಮಂದಿರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಚಿತ್ರ, ಕೇವಲ ಶನಿವಾರ (ಆಗಸ್ಟ್​​ 19) ಒಂದೇ ದಿನದಲ್ಲಿ 10.26 ಕೋಟಿ ರೂ. ಗಳಿಕೆಯನ್ನು ಕಂಡಿದೆ. ಈ ಕುರಿತು ಚಿತ್ರ ತಯಾರಕರು ಸಂತಸ ವ್ಯಕ್ತಪಡಿಸಿದ್ದಾರೆ.

ವಯಾಕಾಮ್ 18 ಸ್ಟುಡಿಯೋಸ್, ಕೇಪ್ ಆಫ್ ಗುಡ್ ಫಿಲ್ಮ್ಸ್ ಮತ್ತು ವಕಾವೂ ಫಿಲ್ಮ್ ಪ್ರೊಡಕ್ಷನ್‌ನ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಓ ಮೈ ಗಾಡ್​ 2 ಚಿತ್ರದಲ್ಲಿ ಅಕ್ಷಯ್​ ಕುಮಾರ್​ ಮತ್ತು ಯಾಮಿ ಗೌತಮ್​ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಪಂಕಜ್ ತ್ರಿಪಾಠಿ, ಗೋವಿಂದ್​ ನಮದೇವ್​, ಅರುಣ್​ ಗೋವಿಲ್​ ಸೇರಿದಂತೆ ಇತರ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net