ಈಜುಕೊಳದಲ್ಲೇ ಪ್ರಜ್ಞೆ ತಪ್ಪಿದ ಈಜುಗಾರ್ತಿಯನ್ನು ರಕ್ಷಿಸಿದ ತಂಡದ ಕೋಚ್: ಸ್ವಲ್ಪದರಲ್ಲೇ ತಪ್ಪಿತು ದುರಂತ

Swimmer
Published on

ನ್ಯೂಯಾರ್ಕ್​: ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಮೆರಿಕದ ಈಜುಗಾರ್ತಿ ಅನಿತಾ ಅಲ್ವರೇಜ್ ಅವರು ಸ್ವಿಮ್ಮಿಂಗ್ ಪೂಲ್ ನಲ್ಲೇ ಪ್ರಜ್ಞೆ ತಪ್ಪಿದ ಘಟನೆ ನಡೆದಿದ್ದು, ಪ್ರಜ್ಞಾಹೀನರಾಗಿ ಈಜುಕೊಳದ ತಳಭಾಗಕ್ಕೆ ಮುಳುಗಿದ ಅವರನ್ನು ತಂಡದ ಕೋಚ್​ ರಕ್ಷಿಸಿದ್ದಾರೆ.

ಬುಡಾಪೆಸ್ಟ್‌ ನಲ್ಲಿ ನಡೆಯುತ್ತಿರುವ ವಿಶ್ವ ಈಜು ಚಾಂಪಿಯನ್‌ಷಿಪ್‌ನ ಆರ್ಟಿಸ್ಟಿಕ್‌ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಅನಿತಾ ಅಲ್ವರೇಜ್ ಪ್ರದರ್ಶನ ನೀಡುತ್ತಿದ್ದಾಗಲೇ ಪ್ರಜ್ಞೆ ಕಳೆದುಕೊಂಡಿದ್ದಾರೆ. ಕೆಲ ಕ್ಷಣದಲ್ಲೇ ಆಕೆಗೆ ಏನೋ ಆಗಿದೆ ಎಂಬುದನ್ನು ಅರಿತ ಮಹಿಳಾ ತಂಡದ ಮುಖ್ಯ ಕೋಚ್‌ ಆಂಡ್ರಿಯಾ ಫುಯೆಂಟಸ್, ತಕ್ಷಣವೇ ನೀರಿಗೆ ಧುಮುಕಿ ಅಲ್ವರೇಜ್ ಅವರನ್ನು ಮೇಲಕ್ಕೆತ್ತಿದ್ದಾರೆ.

ತಂಡದ ಇತರ ಸಿಬ್ಬಂದಿ ಕೂಡಾ ನೆರವಿಗೆ ಬಂದಿದ್ದಾರೆ.ಈಜುಕೊಳದ ಬಳಿಯಿದ್ದ ಲೈಫ್‌ಗಾರ್ಡ್‌ಗಳು ಕೂಡಲೇ ರಕ್ಷಣೆಗೆ ಮುಂದಾಗಲಿಲ್ಲ. ಆದ್ದರಿಂದ ನಾನೇ ನೀರಿಗೆ ಧುಮುಕಿದೆ ಎಂದು ಫುಯೆಂಟಸ್‌ ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net