

ಬೆಂಗಳೂರು: ಸ್ಯಾಂಡಲ್ವುಡ್ ನಟ ಪ್ರಥಮ್ ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಸರಳವಾಗಿ ಎಂಗೇಜ್ ಆಗಿರುವ ವಿಚಾರವನ್ನು ಪ್ರಥಮ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಉಂಗುರ ಧರಿಸಿರುವ ಕೈಗಳ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪ್ರಥಮ್ ''ಒಂದು ಸುಂದರ ಕ್ಷಣ. ಇವತ್ತು ನನ್ನ ಎಂಗೇಜ್ಮೆಂಟ್ ಆಯ್ತು. ಯಾವ ಆಡಂಬರ, ಸಂಭ್ರಮ, ತೋರ್ಪಡಿಕೆ ಇಲ್ಲದೆ ಬಹಳ ಸರಳವಾಗಿ ಕುಟುಂಬದವರು ಮೆಚ್ಚಿದವರ ಜತೆಯಾಗಿದ್ದೇನೆ. ನಾನು ತುಂಬಾ ಸರಳವಾಗಿಯೇ ಬದುಕಿದವನು. ಹಾಗೇ ಇರೋಕೆ ಇಷ್ಟ, ನನ್ನ ಎಂಗೇಜ್ಮೆಂಟ್ ಈ ದೇಶದ ದೊಡ್ಡ ಸುದ್ದಿಯಲ್ಲ. ಆದರೆ ನನ್ನ ಇಷ್ಟಪಡುವ ಸ್ನೇಹಿತರು ಆತ್ಮೀಯರಿಗೆ ವಿಚಾರ ಹಂಚಿಕೊಳ್ಳೋಣ ಎನ್ನೋ ಕಾರಣಕ್ಕೆ ನಿಮಗೆ ತಿಳಿಸಿದ್ದೇನೆ ಅಷ್ಟೇ. ಮದುವೆ ಎಷ್ಟು ಅದ್ಧೂರಿಯಾಗಿ ಆದೆ ಅನ್ನೋದಕ್ಕಿಂತ ಎಷ್ಟು ಚೆನ್ನಾಗಿ ಬದುಕು ಕಟ್ಟಿಕೊಂಡ್ವಿ ಅನ್ನೋದೇ ನಿಜವಾದ ಸಾಧನೆಯಾಗಿದೆ. ನನಗೆ ಹಾಗೇ ಇರೋಕೆ ಇಷ್ಟ, ಹೀಗೇ ಇದ್ದು ಬಿಡುತ್ತೇನೆ, ಹರಸುವವರು ಅಲ್ಲಿಂದಲೇ ಹರಸಿ, ಅದೇ ಆಶೀರ್ವಾದ'' ಎಂದು ಪ್ರಥಮ್ ಬರೆದುಕೊಂಡಿದ್ದಾರೆ.
ಮದುವೆ ಯಾವಾಗ? ನಿಮ್ಮದು ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್? ಶುಭಾಶಯಗಳು ಎಂದು ಕಾಮೆಂಟ್ ಮಾಡುತ್ತಾ ಅಭಿಮಾನಿಗಳು ಶುಭಹಾರೈಸಿದ್ದಾರೆ.
ನನಗೆ ಹುಡುಗಿ ಗೊತ್ತಾಗಿದೆ ಎಂದು ಕೆಲವು ದಿನಗಳ ಹಿಂದೆ ಹೇಳಿದ್ದರು. ಆದರೆ ಹುಡುಗಿ ಯಾರು ಎನ್ನುವದನ್ನು ಬಹಿರಂಗ ಪಡಿಸಿರಲಿಲ್ಲ. ಈಗಲೇ ಆಕೆಯ ಹೆಸರು, ಮಾಹಿತಿ ಆಕೆಗೆ ಅದು ಕಿರಿಕಿರಿ ಎನಿಸಬಹುದು ಎಂದು ಹೇಳಿದ್ದರು.
ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಪ್ರಥಮ್ ಪರಿಚಯ. ಎಂಎಲ್ಎ, ದೇವರಂಥಾ ಮನುಷ್ಯ, ರಾಜು ಕನ್ನಡ ಮೀಡಿಯಂ, ನಟ ಭಯಂಕರ ಸಿನಿಮಾಗಳಲ್ಲಿ ಪ್ರಥಮ್ ನಾಯಕನಾಗಿ ನಟಿಸಿದ್ದಾರೆ.