ದಾಂಪತ್ಯ ಜೀವನಕ್ಕೆ ಕಾಲಿಟ್ಟ ಒಳ್ಳೆ ಹುಡುಗ ಪ್ರಥಮ್

pratam
Published on

ಬೆಂಗಳೂರು: ಬಿಗ್‌ಬಾಸ್‌ ವಿಜೇತ ಪ್ರಥಮ್‌ ಮಂಡ್ಯ ಮೂಲದ ಭಾನುಶ್ರೀ ಜತೆಗೆ  ಸಪ್ತಪದಿ ತುಳಿದು ಬಾಳ ಬಂಧನಕ್ಕೆ ಬಲಗಾರಿಸಿದ್ದಾರೆ. ಈ ಕುರಿತಾದ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ಸಖತ್​​ ವೈರಲ್​ ಆಗಿದೆ.

olle hudga Pratham

ಕಳೆದ ಜೂನ್ ತಿಂಗಳಿನಲ್ಲಿ ಮಂಡ್ಯದ ಭಾನುಶ್ರೀ ಎಂಬುವವರ ಜತೆಗೆ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರಥಮ್, ಸೋಷಿಯಲ್‌ ಮೀಡಿಯಾದಲ್ಲಿ ಈ ವಿಚಾರವನ್ನು ರಿವೀಲ್‌ ಮಾಡಿದ್ದರು. ಅದಾದ ಬಳಿಕ ಶೀಘ್ರದಲ್ಲಿಯೇ ಮದುವೆ ಎಂದೂ ಹೇಳಿಕೊಂಡಿದ್ದರು. ಅದರಂತೆ, ಇದೀಗ ಅಷ್ಟೇ ಸರಳವಾಗಿ, ಯಾವುದೇ ಸದ್ದು ಗದ್ದಲವಿಲ್ಲದೆ‌ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.

ನಟರಾದ ಧ್ರುವ ಸರ್ಜಾ, ನೆನಪಿರಲಿ ಪ್ರೇಮ್‌ ಸೇರಿ ಸ್ಯಾಂಡಲ್‌ವುಡ್‌ನ ಹಲವು ಗಣ್ಯರು ಈ ಜೋಡಿಗೆ ಶುಭ ಹಾರೈಸಿದ್ದಾರೆ. ಅಷ್ಟೇ ಅಲ್ಲದೆ, ಇತ್ತೀಚೆಗಷ್ಟೇ ಬಿಗ್‌ಬಾಸ್‌ನಿಂದ ಹೊರಬಂದ ಇಶಾನಿ, ರಕ್ಷಕ್‌ ಕೂಡ ಪ್ರಥಮ್‌ ಮದುವೆಗೆ ಆಗಮಿಸಿದ್ದರು.

ಕಳೆದ ವಾರವಷ್ಟೇ  ಪ್ರಥಮ್​​ ಸೋಷಿಯಲ್ ಮೀಡಿಯಾದಲ್ಲಿ, ‘ಮುಂದಿನ ವಾರ ಮದುವೆ. ಅಲ್ಲೇ ಬಂದು ಆಶೀರ್ವಾದ ಮಾಡಬೇಕು ಅಂತೇನೂ ಇಲ್ಲ. ಕರೆಯೋಕೆ ಸಂಭ್ರಮವೂ ಇಲ್ಲ. ಆಹ್ವಾನ ಪತ್ರಿಕೆ ತಲುಪಿಸೋದೇ ಹರಸಾಹಸ. ಹಾಗಂತ ಸುಮ್ಮನೆ ಫಾರ್ವರ್ಡ್ ಮೆಸೇಜ್ ಹಾಕಿ ನಿಮ್ಮನ್ನ ಮದುವೆಗೆ ಕಾಟಾಚಾರಕ್ಕೆ ಕರೆಯೋದಿಲ್ಲ. ಈಗ ಎಲ್ಲಿರ್ತೀರೋ ಅಲ್ಲಿಂದಲೇ ಹಾರೈಸಿ. ಗ್ರ್ಯಾಂಡ್ ಆಗಬಹುದಿತ್ತು. ನನಗೆ ಆಸಕ್ತಿ ಇಲ್ಲ. ಸರಳವಾಗಿ ಆಗ್ತಿರೋ ಕಾರಣ ನೀವು ಇದ್ದಲ್ಲಿಯೇ ಹಾರೈಸಿ ಎಂದು ಪ್ರಥಮ್ ಬರೆದುಕೊಂಡಿದ್ದರು.  ಅಂತೆಯೇ ಎರಡು ಕುಟುಂಬಗಳ ಸದಸ್ಯರು ಮತ್ತು ಆಪ್ತರ ಮುಂದೆ ಸರಳವಾಗಿ ಮದುವೆ ಆಗುವುದಾಗಿ ಅವರು ತಿಳಿಸಿದ್ದರು. ಹಾಗೆಯೇ ಪ್ರಥಮ್ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟ, ನಟಿಯರು ಹಾಗೂ ನವ ವಧು, ವರ ಕುಟುಂಬಸ್ಥರು ಭಾಗಿಯಾಗಿ ದಂಪತಿಗೆ ಶುಭ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net