

ಬೆಂಗಳೂರು: ದೇಶೀಯ ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆಯಾಗಿ ಹೆಸರು ಗಳಿಸಿರುವ ಒಲೆಕ್ಟ್ರಾ ಗ್ರೀನ್‌ಟೆಕ್ (Olectra), ಇದೀಗ ತನ್ನ ತ್ರೈಮಾಸಿಕ ವರದಿಯನ್ನು ಬಿಡುಗಡೆಗೊಳಿಸಿದೆ.
ಕಳೆದ ವರ್ಷದ ತ್ರೈಮಾಸಿಕಕ್ಕೆ ಹೋಲಿಸಿ ನೋಡುವುದಾದರೆ, ಪ್ರಸಕ್ತ ವರ್ಷಕ್ಕೆ ಶೇ.4ರಷ್ಟು ಹೆಚ್ಚಿನ ಲಾಭಾಂಶವನ್ನು ಕಂಡಿದೆ. ಅಂದರೆ, 49.43 ಕೋಟಿ ರೂ. ಆದಾಯ ಹರಿದುಬಂದಿದೆ ಎಂದು ಸಂಸ್ಥೆ ತಿಳಿಸಿದೆ. ಕಳೆದ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ತೆರಿಗೆ ನಂತರದ ಲಾಭವನ್ನು 47.65 ಕೋಟಿ ರೂ.ಗೆ ತಲುಪಿದೆ.
ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಆದಾಯವು 657 ಕೋಟಿ ರೂ.ಗೆ ಏರಿಕೆಯಾಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು 524 ಕೋಟಿ ರೂ.ಗಳಷ್ಟಿತ್ತು ಎಂದು ಸಂಸ್ಥೆಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.