

ವಾಷಿಂಗ್ಟನ್; ಮದುವೆಯಾದ ಅನೇಕ ನವಜೋಡಿಗಳು ಕೆಲ ವರ್ಷಗಳ ನಂತರ ಒಬ್ಬರಿಗೊಬ್ಬರು ದೂರ ಆಗುತ್ತಾರೆ. ಆದರೆ, ಇನ್ನೂ ಕೆಲವು ಜೋಡಿಗಳು ಸಾಯುವವರೆಗೂ ಅನ್ಯೋನ್ಯತೆಯಿಂದ ಬದುಕಿರುತ್ತಾರೆ. ಅಲ್ಲದೇ ಇತರರಿಗೆ ಮಾದರಿಯಾಗಿರುತ್ತಾರೆ.
ಆದರೆ ಇಲ್ಲೊಂದು ವಯಸ್ಸಾದ ಜೋಡಿ ತಮಗೆ ವಯಸ್ಸೇ ಆಗಿಲ್ಲವೇನೋ ವಯಸ್ಸು ಎಂಬುದು ಜಸ್ಟ್ ಅದೊಂದು ನಂಬರ್ ಎನ್ನುತ್ತಿದೆ. ವಯಸ್ಸು 90 ಮೀರಿದ್ದರೂ ಪಾಪ್ ಸಂಗೀತಕ್ಕೆ ಕುಣಿದು ಕುಪ್ಪಳಿಸಿದೆ.
ಈ ಅಜ್ಜ ಅಜ್ಜಿಯ ಸಕತ್ ಡ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೇ 6 ರಂದು ವಾಷಿಂಗ್ಟನ್ ನಲ್ಲಿ ನಡೆದ ಘಟನೆ ಇದಾಗಿದೆ ಎಂಬುದು ತಿಳಿದು ಬಂದಿದೆ. ಪೆಡ್ ಎನ್ನುವರು ಇದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು 10 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.
ವಯಸ್ಸಾದರೂ ಅನ್ಯೋನ್ಯತೆಯಿಂದ ಇರುವುದು ಮುಖ್ಯ. ಅದರಲ್ಲೂ ಜೀವನದ ಪ್ರತಿಯೊಂದು ಕ್ಷಣವನ್ನು ಆನಂದಿಸುವುದು ಬಹುಮುಖ್ಯ ಎಂಬುದನ್ನು ಈ ಜೋಡಿ ಸಾಬೀತು ಪಡಿಸುತ್ತದೆ.