VIDEO | ಯುವ ಜನರನ್ನೇ ನಾಚಿಸುವಂತೆ ಮ್ಯಾರಾಥಾನ್​ನಲ್ಲಿ ಪಾಲ್ಗೊಂಡ 80 ವರ್ಷದ ಅಜ್ಜಿ!

old woman runs Mumbai marathon
Published on

ಮಹಾರಾಷ್ಟ್ರ: ಟಾಟಾ ಮುಂಬೈ ಮ್ಯಾರಥಾನ್‌ನ 18 ನೇ ಆವೃತ್ತಿಯಲ್ಲಿ ಎಲ್ಲ ವಯಸ್ಸಿನ ಜನರಿಗೂ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ 55,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಇದೀಗ ಈ ಮ್ಯಾರಾಥಾನ್​ನಲ್ಲಿ ಪಾಲ್ಗೊಂಡಿದ್ದ ಸ್ಫರ್ಧಿಯೊಬ್ಬರ ಉತ್ಸಾಹದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ಅವರ ವಯಸ್ಸು.

80 ವರ್ಷದ ಅಜ್ಜಿಯೊಬ್ಬರು ಸೀರೆ ಉಟ್ಟು ವಯಸ್ಕರು ನಾಚುವಂತೆ ಮ್ಯಾರಾಥಾನ್​ನಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಅಜ್ಜಿಯ ಮೊಮ್ಮಗಳು ಡಿಂಪಲ್ ಮೆಹ್ತಾ ಫೆರ್ನಾಂಡಿಸ್ ಅವರು ಇನ್ಸ್​​ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಅಜ್ಜಿಯ ಉತ್ಸಾಹವನ್ನು ಕಂಡು ಮೆಚ್ಚುಗೆಯ ಕಮೆಂಟ್ ಮಾಡುತ್ತಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಅಜ್ಜಿ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು 51 ನಿಮಿಷಗಳಲ್ಲಿ 4.2 ಕಿ.ಮೀ. ದೂರ ಮ್ಯಾರಾಥಾನ್​ನಲ್ಲಿ ಕ್ರಮಿಸಿದ್ದಾರೆ. ಈ ಬಗ್ಗೆ ಮಾಹಿತಿ ಸಂತಸ ಹಂಚಿಕೊಂಡಿರುವ ಮೊಮ್ಮಗಳು ಡಿಂಪಲ್ ಮೆಹ್ತಾ, ಸ್ವಇಚ್ಛೆಯಿಂದ ಪಾಲ್ಗೊಂಡು ಉತ್ಸಾಹದಿಂದ ಅಜ್ಜಿ ಮ್ಯಾರಾಥಾನ್​ನಲ್ಲಿ ಭಾಗವಹಿಸಿದ್ದಾರೆ ಎಂದಿದ್ದಾಳೆ.

ಐದನೇ ಬಾರಿಗೆ ಮ್ಯಾರಾಥಾನ್​ನಲ್ಲಿ ಭಾಗವಹಿಸುತ್ತಿದ್ದು, ಪ್ರತಿದಿನ ಅಭ್ಯಾಸ ಮಾಡುತ್ತೇನೆ ಎಂದು 80 ವರ್ಷದ ವೃದ್ಧೆ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net