ನಿರ್ಜನ ಪ್ರದೇಶದಲ್ಲಿ ಆಟೋ ಡ್ರೈವರ್ ತಲೆ ಮೇಲೆ ಕಲ್ಲು ಎತ್ತಿ ಹಾಕಿದ ದುಷ್ಕರ್ಮಿಗಳು!

ಕೊಲೆ
Published on

ವಿಜಯಪುರ: ನಿರ್ಜನ ಪ್ರದೇಶದಲ್ಲಿ ಆಟೋ ಚಾಲಕನೊಬ್ಬನನ್ನು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆಗೈದ ಘಟನೆ ಗುರುವಾರ ಇಲ್ಲಿನ ಆಲಕುಂಟೆ ನಗರದಲ್ಲಿ ನಡೆದಿದೆ. ಮಲ್ಲಿಕಾರ್ಜುನ ದೊಡಮನಿ(43) ಹತ್ಯೆಗೀದಾಡ ವ್ಯಕ್ತಿ.

ಮೃತ ಮಲ್ಲಿಕಾರ್ಜುನ ಮೂರು ವರ್ಷಗಳ ಹಿಂದೆ ಸಂಸದ ರಮೇಶ ಜಿಗಜಿಣಗಿ ವಾಹನ ಚಾಲಕನಾಗಿ ಕೆಲಸ ಮಾಡಿದ್ದ ಎನ್ನಲಾಗಿದೆ. ಬಳಿಕ ಅಟೋ ಚಾಲಕನಾಗಿ ದುಡಿಯುತ್ತಿದ್ದ.

ನಗರದ ಬಾಡರ ಓಣಿಯ ನಿವಾಸಿಯಾಗಿದ್ದ ಮಲ್ಲಿಕಾರ್ಜುನ ದೊಡಮನಿ, ಇತ್ತೀಚೆಗೆ ಕೆಲ ದಿನಗಳಿಂದ ಸರಿಯಾಗಿ ಕೆಲಸಕ್ಕೆ ಹೋಗದೆ ಅಲೆದಾಡುತ್ತಿದ್ದ. ನಿನ್ನೆ(ಜ.18) ರಾತ್ರಿ ಸಹೋದರಿ ಶಾಂತವ್ವಳನ್ನು ಆಕೆಯ ಮನೆಗೆ ಬಿಟ್ಟು ಬರಲು ಹೋಗಿದ್ದ. ಅಲ್ಲಿಂದ ಹಿಂತಿರುಗುವಾಗ, ಆರೋಪಿಗಳು ಅಪಹರಿಸಿ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಹಣಕಾಸಿನ‌ ವ್ಯವಹಾರವೇ ಮಲ್ಲಿಕಾರ್ಜುನನ ಕೊಲೆಗೆ ಕಾರಣ ಎನ್ನುವ ಸಂಶಯ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ‌ಎಎಸ್​ಪಿ ಶಂಕರ ಮಾರಿಹಾಳ, ಆದರ್ಶ ನಗರ ಪಿಎಸ್​​ಐ ಯತೀಶ್ ಹಾಗೂ ಶ್ವಾನದಳ ಭೇಟಿ ಪರಿಶೀಲನೆ ನಡೆಸಿದೆ. ಆದರ್ಶ ನಗರ ಪೊಲೀಸ್ ಠಾಣಾ‌ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net