ಕಾಂಗ್ರೆಸ್​ನ 'ನಾ ನಾಯಕಿ' ಕಾರ್ಯಕ್ರಮದಲ್ಲಿ ಕಳ್ಳರ ಕೈ ಚಳಕ! ವೃದ್ಧೆಯ ಸರ ಕಳವು ಮಾಡಿದ ಖದೀಮರು

priyanka gandhi
Published on

ಬೆಂಗಳೂರು: ಇತ್ತೀಚಿಗೆ ಅರಮನೆ ಮೈದಾನದಲ್ಲಿ ಇತ್ತೀಚಿಗೆ ನಡೆದ ಕಾಂಗ್ರೆಸ್​ನ 'ನಾ ನಾಯಕಿ' ಕಾರ್ಯಕ್ರಮದಲ್ಲಿ ಕಳ್ಳರ ಕೈ ಚಳಕ ತೋರಿದ್ದಾರೆ.

ಕಾಂಗ್ರೆಸ್​ ನಾಯಕಿ ಪ್ರಿಯಾಂಕ ಗಾಂಧಿ ಅವರು ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ ಎಂದೇ ರಾಜ್ಯದ ಮೂಲೆ ಮೂಲೆಗಳಿಂದಲೂ ಸಾವಿರಾರು ಮಹಿಳೆಯರು ಈ ಸಮಾವೇಶಕ್ಕೆ ಆಗಮಿಸಿದ್ದರು. ಜನಸಂದಣಿ ಹೆಚ್ಚಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು 30 ಗ್ರಾಂ ತೂಕದ ಚಿನ್ನದ ಸರ ಕಳವು ಮಾಡಿದ್ದಾರೆ.

ತುಮಕೂರಿನ ವೃದ್ಧೆ ಚಿಕ್ಕತಾಯಮ್ಮ ಅವರ ಸರ ಕಳವಾಗಿದೆ. ನಾ ನಾಯಕಿ ಕಾರ್ಯಕ್ರಮಕ್ಕೆ ವೃದ್ಧೆ ಬಂದಿದ್ದರು. ಜನಸಂದಣಿ ಹೆಚ್ಚಾಗಿದ್ದ ವೇಳೆ ವೃದ್ಧೆಯ ಕತ್ತಿನಲ್ಲಿದ್ದ ಸರವನ್ನ ಯಾರೋ ಎಗರಿಸಿದ್ದಾರೆ. ಆಘಾತಗೊಂಡ ವೃದ್ಧೆ ಚಿಕ್ಕತಾಯಮ್ಮ ಅವರು ಈ ಬಗ್ಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net